ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಗೆ ಕೋರ್ಟ್ ಬುಲಾವ್: ಬಾಷಾ ಆರೋಪಗಳೇನು?

By Srinath
|
Google Oneindia Kannada News

lokayukta-summons-bsy-denotification-case-details
ಬೆಂಗಳೂರು, ಫೆ. 5: ಯಡಿಯೂರಪ್ಪ ತಮ್ಮ ಅಧಿಕಾರಾವಧಿ (2008)ಯಲ್ಲಿ ನಿಯಮ ಉಲ್ಲಂಘಿಸಿ ಬೆಂಗಳೂರಿನ ಕೆ.ಆರ್.ಪುರ ಹೋಬಳಿಯ ರಾಚೇನಹಳ್ಳಿ ಗ್ರಾಮದ ಸರ್ವೇ ನಂ.56ರಲ್ಲಿ 16 ಗುಂಟೆ ಜಮೀನನ್ನು ಅವರ ಪುತ್ರರು ಮತ್ತು ಅಳಿಯ ಶೇ.75ರಷ್ಟು ಪಾಲು ಹೊಂದಿದ ಧವಳಗಿರಿ ಪ್ರಾಪರ್ಟೀಸ್‌ಗೆ ಡಿನೋಫಿಕೇಷನ್ ಮಾಡಿದ್ದಾರೆ.

ರಾಚೇನಹಳ್ಳಿ ಗ್ರಾಮದ ಸರ್ವೇ ನಂ.55/2ರಲ್ಲಿ 1.12 ಎಕರೆ ಜಮೀನು ಡಿನೋಟಿಫೈ ಮತ್ತು ನಾಗವಾರದ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯಲ್ಲಿ ರಸ್ತೆಗೆ ಮೀಸಲಿಟ್ಟಿದ್ದ 47,972 ಚ.ಅ ಜಾಗವನ್ನು ಧವಳಗಿರಿಗೆ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಸಿರಾಜಿನ್ ಬಾಷಾ 2011ರ ಜ.22ರಂದು ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದೂರುದಾರನ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಕೋರ್ಟ್, 2011ರ ಮಾ.26ರಂದು ಸಿಆರ್‌ಪಿಸಿ ಕಲಂ 202 ಅಡಿ ಪ್ರಕರಣವನ್ನು ಲೋಕಾಯುಕ್ತ ಪೊಲೀಸರ ತನಿಖೆಗೆ ವಹಿಸಿ, ವರದಿ ನೀಡುವಂತೆ ನಿರ್ದೇಶಿಸಿತ್ತು. ಸುಮಾರು 6ತಿಂಗಳ ಕಾಲ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಿ, ಯಡಿಯೂರಪ್ಪ ನಿಯಮ ಬಾಹಿರವಾಗಿ ಸರಕಾರಿ ಜಮೀನನ್ನು ತಮ್ಮ ಪುತ್ರರಿಗೆ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬುದನ್ನು ದೃಢಪಡಿಸುವ ಸಾಕ್ಷಾಧಾರಗಳು ತನಿಖೆಯ ವೇಳೆ ಲಭಿಸಿವೆ ಎಂದು ವರದಿ ತಿಳಿಸಿತ್ತು.ದು.

ಈ ಆರೋಪಗಳಿಗೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಲೋಕಾಯುಕ್ತ ಪೊಲೀಸರು ವರದಿ ನೀಡಿದ್ದರು. ಆ ವರದಿ ಆಧಾರದ ಮೇಲೆ ಸಮನ್ಸ್ ಜಾರಿಗೊಳಿಸಲಾಗಿದೆ. ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಿಚಾರಣೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ, ಮಾ.3ಕ್ಕೆ ವಿಚಾರಣೆ ಮುಂದೂಡಿದರು.

English summary
It’s back to court for former chief minister B.S. Yeddyurappa as the Lokayukta court on Saturday ordered summons be issued against him, his relatives and former minister Ess Enn Krishnaiah Setty in the first private complaint filed by advocate Sirajin Basha against alleged illegal land denotification. Case details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X