ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: ವಿದೇಶಿಯರ ನಂಗಾನಾಚ್, ಸಿಎಂ ಸಮರ್ಥನೆ

By Mahesh
|
Google Oneindia Kannada News

 Foriegn Culture Fest Malpe
ಉಡುಪಿ, ಫೆ.5: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಮೂರು ದಿನಗಳ ಕಾಲ ನಡೆದ 'Island Festival-2012" ಎಂಬ ರೇವ್ ಪಾರ್ಟಿ ಕಾರ್ಯಕ್ರಮವನ್ನು ಸಿಎಂ ಸದಾನಂದ ಗೌಡರು ಸಮರ್ಥಿಸಿಕೊಂಡಿದ್ದಾರೆ.

ಇದೊಂದು ಜಿಲ್ಲಾಡಳಿತ ನಡೆಸುತ್ತಿರುವ ರೇವ್ ಪಾರ್ಟಿ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅದರೆ, ಇದು ಸಂಸ್ಕೃತಿ ವಿನಿಮಯ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಂಥಾ ಪಾರ್ಟಿಗಳು ಅವಶ್ಯಕ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮ ಸೂಕ್ತವಾಗಿದೆ ಎಂದು ಸದಾನಂದ ಗೌಡರು ಹೇಳಿದ್ದಾರೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಪಿಡಬ್ಲ್ಯು ಕಾನ್ಸೆಪ್ಟ್ ಹಾಗೂ ಕಿಂಗ್‌ಫಿಶರ್ ಜಂಟಿಯಾಗಿ ಮಲ್ಪೆ ಸೈಂಟ್ ಮೇರೀಸ್ ದ್ವೀಪದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಉತ್ಸವ -2012" ಹಮ್ಮಿಕೊಂಡಿದೆ.

ಕರಾವಳಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಯುರೋಪ್ ಸೇರಿದಂತೆ ವಿವಿಧ ದೇಶಗಳಿಂದ ಸಾಂಸ್ಕೃತಿಕ ಜನಪದ ತಂಡಗಳು ಹಗಲು-ರಾತ್ರಿ ವಿದೇಶಿಯರನ್ನು ರಂಜಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಈ ಕಾರ‍್ಯ ಕಮ್ರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಲ್ಲಿಯ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಕೂಡಾ ಸಮರ್ಥಿಸಿಕೊಂಡಿದ್ದಾರೆ.

ರೇವ್ ಪಾರ್ಟಿ ವಾಸನೆ: ವಿದೇಶಿಯರು ಎಗ್ಗಿಲ್ಲದೆ ಮಾದಕ ವಸ್ತುಗಳನ್ನು ಒಯ್ದಿದ್ದಾರೆ. ಈಗಾಗಲೇ ಅಮಲು ಪದಾರ್ಥ ಸೇವಿಸಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದು, ಟು ಪೀಸ್‌ನಲ್ಲಿ ಕುಣಿಯಲು ಶುರುವಿಟ್ಟುಕೊಂಡಿದ್ದಾರೆ.

ವಿದೇಶಿಯರು ಇಲ್ಲಿನ ಬೀಚ್ ಗಳಿಗೆ ಬರುವುದು ಹೊಸತೇನಲ್ಲ. ಆದರೆ, ಎಂದೂ ನಂಗಾನಾಚ್ ರೀತಿ ಪಾರ್ಟಿಗಳು ನಡೆಯುತ್ತಿರಲಿಲ್ಲ. ಸರ್ಕಾರದ ನೇರ ಕೃಪೆ ಇರುವುದರಿಂದ ಯಾರೂ ಏನು ಮಾಡಲಾಗುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

English summary
CM Sadananda Gowda has defended Rave party kind of Island Festival organised at St. Mary’s island, Udupi. The organiser say this festival is to introduce local culture to the foreigners. Sadananda says local administration is promoting tourism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X