ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿದಂಬರಂಗೆ ಕ್ಲೀನ್ ಚಿಟ್, ಸಿಬಿಐ ತನಿಖೆ ಇಲ್ಲ

By Srinath
|
Google Oneindia Kannada News

ನವದೆಹಲಿ, ಫೆ.4: ಕೇಂದ್ರ ಗೃಹ ಸಚಿವ ಪಳನಿಯಪ್ಪನ್ ಚಿದಂಬರಂ ಅವರ ಪರ ಸಿಬಿಐ ಕೋರ್ಟಿನಿಂದ ನಿರೀಕ್ಷಿತ ತೀರ್ಪು ಹೊರಬಿದ್ದಿದೆ. ಚಿದಂಬರಂ ವಿರುದ್ಧ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ತನಿಖೆ ನಡೆಸುವುದು ಬೇಡ ಎಂದು ದೆಹಲಿಯ ವಿಶೇಷ ಸಿಬಿಐ ಕೋರ್ಟ್‌ ನ್ಯಾ ಒಪಿ ಸೈನಿ ಆದೇಶಿಸಿದ್ದಾರೆ. ಇದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಭಾರಿ ಜಯ ಸಿಕ್ಕಂತಾಗಿದೆ. ವನ್ಇಂಡಿಯಾ ಕನ್ನಡ ಬೆಳಗ್ಗೆಯೇ ಇದನ್ನು ಹೇಳಿತ್ತು.

ಇದರಿಂದ ತನ್ನ ಬಾಸ್ ಆಗಿರುವ ಗೃಹ ಸಚಿವ ಚಿದಂಬರಂ ವಿರುದ್ಧವೇ ವಿಚಾರಣೆ ನಡೆಸುವ ಮುಜುಗರದಿಂದ ಸಿಬಿಐ ಬಚಾವಾಗಿದೆ. ಕುತೂಹಲದ ಸಂಗತಿಯೆಂದರೆ ಚಿದಂಬರಂ ವಿರುದ್ಧ ತನಿಖೆ ನಡೆಸುವುದು ಬೇಡ ಎಂದು ಆದೇಶಿಸಿರುವ ಹರಿಯಾಣ ಮೂಲದ ನ್ಯಾಯಮೂರ್ತಿ ಸೈನಿ ಅವರೂ ಗೃಹ ಇಲಾಖೆಯ ಅಧೀನಕ್ಕೆ ಒಳಪಡುವ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ 1981ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದವರು.

ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್‌ ಸ್ವಾಮಿ ಅವರು ನ್ಯಾ ಸೈನಿ ಎದುರು ಜನವರಿ 21ರಂದು ವಾದ ಮಂಡಿಸುತ್ತಾ, 2ಜಿ ಹಗರಣದಲ್ಲಿ ಚಿದಂಬರಂ ಕೈವಾಡ ಇರುವುದು ಮೇಲ್ನೋಟಕ್ಕೇ ದೃಢಪಟ್ಟಿದೆ ಎಂದಿದ್ದರು. ಜತೆಗೆ, ಸಾಕಷ್ಟು ದಾಖಲೆ ಪತ್ರಗಳನ್ನೂ ಸಾಕ್ಷಿಯಾಗಿ ಒದಗಿಸಿದ್ದರು. ಇದೀಗ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

English summary
The Special CBI court in Patiala House complex has given CLEAN CHIT to home minister P Chidambaram on Saturday (Feb. 4)in 2 G case. It is one huge sigh of relief to the home minister P Chidambaram as well as Congress lead UPA Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X