ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಶ್ರೀ ಟಿವಿ ಮೇಲೆ ಸಿಟ್ಟಿಗೆದ್ದ ಶಾಸಕ ಸಿಟಿ ರವಿ

By Mahesh
|
Google Oneindia Kannada News

MLA CT Ravi
ಬೆಂಗಳೂರು, ಫೆ.3: ಭೂ ಕಬಳಿಕೆ ಮತ್ತು ಭ್ರಷ್ಟಾಚಾರ ಆರೋಪ ಹೊರೆಸಿ, ಸುಳ್ಳು ಸುದ್ದಿಯನ್ನು ಪದೇ ಪದೇ ಪ್ರಸಾರ ಮಾಡಿರುವ ಜನಶ್ರೀ ಸುದ್ದಿ ವಾಹಿನಿ ವಿರುದ್ಧ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರು ಸ್ಪೀಕರ್ ಬೋಪಯ್ಯ ಅವರಿಗೆ ದೂರು ನೀಡಿದ್ದಾರೆ.

ನನ್ನ ಘನತೆಗೆ ಚ್ಯುತಿ ಉಂಟು ಮಾಡಿ, ಶಾಸಕರಾಗಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುವ ರೀತಿಯಲ್ಲಿ ಮೂರು ದಿನಗಳ ಕಾಲ ಜನಶ್ರೀ ಸುದ್ದಿವಾಹಿನಿ ಸುದ್ದಿ ಪ್ರಸಾರ ಮಾಡಿದೆ. ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುವುದು ಹಾಗಿರಲಿ. ಕನಿಷ್ಠಪಕ್ಷ ನನ್ನ ಅಭಿಪ್ರಾಯವನ್ನಾದರೂ ಕೇಳಬಹುದಿತ್ತು.

ಶಾಸಕನಾಗಿ ಕರ್ತವ್ಯ ನಿರ್ವಹಿಸದಂತೆ ಭಯ ಸೃಷ್ಟಿಸುವ ಮೂಲಕ ಮಾನಹಾನಿ ಮಾಡಿರುವ ಸುದ್ದಿ ವಾಹಿನಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನನ್ನ ಬಳಿ ಈ ಸಂಚಿನ ಹಿಂದೆ ಯಾರಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ ಎಂದು ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಲ್ಲಿಸಿರುವ ದೂರನ್ನು ಸ್ಪೀಕರ್ ಕೆ.ಜಿ.ಬೋಪಯ್ಯ ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿದ್ದಾರೆ.

ಆದರೆ, ಈ ಸಂದರ್ಭದಲ್ಲಿ ಸುದ್ದಿ ವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ, ವಿರೋಧಿಸಿ 'ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ' ಎಂದರು.

ಆದರೆ ಕಾಂಗ್ರೆಸ್‌ನ ಡಾ.ಎಂ.ಸಿ.ಸುಧಾಕರ್ ಹಾಗೂ ಅವರು ಕಾನೂನು ಸಚಿವ ಸುರೇಶ್‌ಕುಮಾರ್ ರವಿಯವರನ್ನು ಬೆಂಬಲಿಸಿದರು. ನಂತರ ಸ್ಪೀಕರ್ ದೂರನ್ನು ಸಮಿತಿಗೆ ವರ್ಗಾಯಿಸಿರುವುದಾಗಿ ಪ್ರಕಟಿಸಿದರು. ಶಾಸಕ ಸಿಟಿ ರವಿ ಹಾಗೂ ಅವರ ಪತ್ನಿ ವಿರುದ್ಧ ಸಿಎ ಸೈಟ್ ಗಿಟ್ಟಿಸಿಕೊಂಡ ಆರೋಪ ಹೊರೆಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

English summary
Chikmagalur MLA CT Ravi has alleged that Janasri TV Channel has aired defamatory packaged news against him and seeked LS House intervention in this matter and demanded for media regulations. Legislative Assembly has refferred the allegation by CT Ravi to the privileges committee for a probe. CT Ravi is facing charges against him for benefited with CA Sites vioalting rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X