ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು

By Mahesh
|
Google Oneindia Kannada News

Muammar Gaddafi Shirt Auction
ಟ್ರಿಪೋಲಿ/ಲಂಡನ್, ಫೆ.3: ವಿಚಿತ್ರ, ವಿಕ್ಷಿಪ್ತ ಮನೋಭಾವದ ಸರ್ವಾಧಿಕಾರಿ ಮುಹಮ್ಮರ್ ಗಡಾಫಿ ಸಾವಿನ ನಂತರವೂ ಆತನ ಗುಂಗು ಇನ್ನೂ ನಿಂತಿಲ್ಲ. ಗಡಾಫಿ ಸತ್ತಾಗ ಆತನ ಮೈಮೇಲಿದ್ದ ಬಟ್ಟೆ ಭಾರಿ ಮೊತ್ತದ ಹರಾಜಿಗೆ ಸಿದ್ಧವಾಗಿದೆ.

ಗಡಾಫಿ ಶವದ ಮೇಲಿದ್ದ ರಕ್ತಸಿಕ್ತ ಅಂಗಿ ಹಾಗೂ ಆತನ ಕೈಲಿದ್ದ ಮದುವೆ ಉಂಗುರ (ಬೆಳ್ಳಿಯದ್ದು) ಹರಾಜಿಗೆ ಇಡಲಾಗಿದೆ. 2 ಮಿಲಿಯನ್ ಡಾಲರ್ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಲಿಬಿಯನ್ ನಾಯಕ ಅಹ್ಮದ್ ವಾರ್ಫಾಲಿ ಹೇಳಿದ್ದಾರೆ.

ಆದರೆ, ಗಡಾಫಿ ಅವರಿಗೆ ಸೇರಿದ ವಸ್ತುಗಳನ್ನು ಹರಾಜು ಹಾಕುವುದಕ್ಕೆ ಅನೇಕರ ವಿರೋಧವಿದೆ. ಗಡಾಫಿಯ ಬಳಿ ಇರುವ ಉಂಗುರ ಆತನಿಗೆ ಸೇರಿದ್ದಲ್ಲ. ಅದು ಸರ್ಕಾರಿ ಸ್ವತ್ತು ಎಂದು ಅನೇಕರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ನ್ಯಾಟೋ ಪಡೆಗಳ ದಾಳಿಗೆ ತುತ್ತಾಗಿ ಶಿರ್ತೆ ಬಳಿ ದುರಂತ ಸಾವನ್ನಪ್ಪಿದ್ದರು. ಇತ್ತೀಚೆಗೆ ಗಡಾಫಿ ಮಗ ಸೈಫ್ ಅಲ್ ಇಸ್ಲಾಮ್ ಕೂಡಾ ಸೆರೆಸಿಕ್ಕಿದ್ದ. ಅಪ್ಪನಂತೆ ಕಾಮಪಿಪಾಸು ಎಂದು ಆರೋಪ ಹೊರೆಸಲಾಗಿತ್ತು. ಬೇಕಾದರೆ ಸೈಫ್ ನನ್ನು 20 ಮಿಲಿಯನ್ ಡಾಲರ್ ಗೆ ಹರಾಜು ಹಾಕಿ ಎಂದು ಫೇಸ್ ಬುಕ್ ನಲ್ಲಿ ಕೂಗು ಎದ್ದಿದೆ.

English summary
Slain dictator of Libya, Muammar Gaddafi's bloodied shirt and wedding ring have been put up for $2 million auction. Gaddafi was wearing the silver ring and the beige coloured bloodied shirt when he was killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X