ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಂತ ಭಾರತೀಯರಿಗೆ ಮಾತ್ರ ಬ್ರಿಟನ್ ಮಣೆ

By Prasad
|
Google Oneindia Kannada News

Only rich Indian immigrants are welcome inside Britain
ಲಂಡನ್, ಫೆ. 2 : ಕಡಿಮೆ ಆದಾಯ ಇರುವವರು, ಜೀವನದ ಗುಣಮಟ್ಟವನ್ನು ಏರಿಸಿಕೊಳ್ಳಲು ವಿಫಲವಾಗುವ ಭಾರತೀಯರಿಗೆ ಇನ್ನು ಮುಂದೆ ಬ್ರಿಟನ್ ಪ್ರವೇಶಿಸಲು ಅವಕಾಶವಿಲ್ಲ. ಒಂದು ವೇಳೆ ಪ್ರವೇಶಿಸಿಯೂ ಉತ್ತಮ ಆದಾಯ ಹೊಂದಲು ಸೋತವರು ಚಕ್ಕಡಿ ಬಂಡಿ ಕಟ್ಟಬೇಕಾಗುತ್ತದೆ.

ಬ್ರಿಟನ್ ತನ್ನ ವಲಸೆ ನೀತಿಯನ್ನು ಕಠಿಣಗೊಳಿಸಲು ಗುರುವಾರ ನಿರ್ಧರಿಸಿದ್ದು, ವಲಸೆ ಸಚಿವ ಡೇಮಿಯನ್ ಗ್ರೀನ್ ಮೇಲಿನ ಎರಡು ಪ್ರಸ್ತಾವನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದ್ದಾರೆ. ಯೂರೋಪಿನ್ನೇತರರಿಗೆ ಮತ್ತು ಭಾರತೀಯ ವಲಸೆಗಾರರಿಗೆ ಮತ್ತು ವೃತ್ತಿಪರರಿಗೆ ಈ ಪ್ರಸ್ತಾವನೆಗಳು ಮುಳುವಾಗುವ ಸಂಭವನೀಯತೆಯಿದೆ.

ವ್ಯಾಸಂಗದ ನಂತರ ನೀಡುವ ಕೆಲಸದ ವೀಸಾವನ್ನು ರದ್ದುಪಡಿಸಲು ಬ್ರಿಟನ್ ಸರಕಾರ ಈಗಾಗಲೆ ನಿರ್ಧರಿಸಿದೆ. ಅಲ್ಲದೆ, ಐದು ವರ್ಷವಿದ್ದೂ 31 ಸಾವಿರ ಪೌಂಡ್ ಆದಾಯ ಗಳಿಸಲು ವಿಫಲರಾದವರು ತಮ್ಮ ತವರಿಗೆ ಮರಳಬೇಕಾಗುತ್ತದೆ. ಅದಕ್ಕೂ ಹೆಚ್ಚು ಆದಾಯ ಗಳಿಸಿದವರಿಗೆ, ಅಂದರೆ ಶ್ರೀಮಂತರಿಗೆ ಮಾತ್ರ ಮಣೆ ಹಾಕಲು ಬ್ರಿಟನ್ ನಿರ್ಧರಿಸಿದೆ.

ಅಲ್ಲದೆ, ವಾರ್ಷಿಕ ಆದಾಯ 25 ಸಾವಿರ ಪೌಂಡ್‌ಗಿಂತಲೂ ಜಾಸ್ತಿ ಇದ್ದ ಬ್ರಿಟನ್ ನಾಗರಿಕರಿಗೆ ವಿದೇಶಿ ಹೆಂಡತಿಯನ್ನು ಕರೆತರಲು ಅವಕಾಶ ನೀಡಲಾಗುವುದು. ಭವಿತವ್ಯದಲ್ಲಿ ತಮ್ಮ ಕಾಲಮೇಲೆ ತಾವು ನಿಲ್ಲಲಾಗದೆ, ಹಣಕಾಸು ಸಹಾಯವನ್ನು ಯಾಚಿಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿಬಂಧನೆಯನ್ನು ಹೇರಲಾಗಿದೆ.

ಉನ್ನತ ಶಿಕ್ಷಣಕ್ಕೆಂದು ಬ್ರಿಟನ್ನಿಗೆ ತೆರಳಿ, ಅಲ್ಲಿಯೇ ಕೆಲಸ ಹುಡುಕಿ, ಅಲ್ಲಿಯೇ ಸೆಟ್ಲ್ ಆಗುವ ಕನಸು ಕಾಣುತ್ತಿದ್ದ ಯುವ ಭಾರತೀಯರು ಇನ್ನು ಅಂತಹ ಕನಸು ಕಾಣುವುದನ್ನು ನಿಲ್ಲಿಸಬೇಕು. ಈ ಹೊಸ ನೀತಿ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿಯೂ ಭಾರೀ ಖಂಡನೆಗೆ ಗುರಿಯಾಗಿದೆ.

English summary
Only rich Indian immigrants, who can afford to add quality to life, as per Britain standard, can dream of moving to Britain or can stay in that country. Whose income is less than 31,000 pounds at the end of 5 years will be kicked out of Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X