ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾ ಜೈಲುವಾಸಕ್ಕೆ 1 ವರ್ಷ: ಇಂದೇನಾಗಲಿದೆ?

By Srinath
|
Google Oneindia Kannada News

chidambaram-role-in2g-scam-crucial-verdict-today-feb2
ನವದೆಹಲಿ, ಫೆ.2: ಮಾಜಿ ದೂರಸಂಪರ್ಕ ಸಚಿವ ಎ ರಾಜಾ ಎಂಬ ಪ್ರಭೃತಿ ತಿಹಾರ ಜೈಲುಪಾಲಾಗಿ ಒಂದು ವರ್ಷವಾಗಿದೆ. ಆದರೆ ಇದೇ ದಿನ ಕೋಟ್ಯಂತರ ರುಪಾಯಿ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ಏನಪಾ ಅಂದರೆ ಹಣಕಾಸು ಸಚಿವರಾಗಿದ್ದಾಗ ಹಾಲಿ ಗೃಹ ಸಚಿವ ಪಿ ಚಿದಂಬರಂ ಸ್ಪೆಕ್ಟ್ರಂ ದರ ನಿಗದಿಪಡಿಸುವಲ್ಲಿ ತಮ್ಮ ಕರಾಮತ್ತು ತೋರಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ.

ನ್ಯಾ ಜಿಎಸ್ ಸಂಘ್ವಿ ಮತ್ತು ನ್ಯಾ ಎಕೆ ಗಂಗೂಲಿ ಅವರ ಪೀಠವು ವಕೀಲ ಪ್ರಶಾಂತ್ ಭೂಷಣ್ ಮತ್ತು ಜನತಾ ಪಾರ್ಟಿಯ ಸುಬ್ರಮಣ್ಯ ಸ್ವಾಮಿ ಚಿದಂಬರಂ ಪಾತ್ರದ ಬಗ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ತಿಗೊಳಿಸಿದ್ದು, ಇಂದು ತೀರ್ಪು ನೀಡಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ ಅವರು ನ್ಯಾಯಪೀಠದಲ್ಲಿ ಇಂದು ಕೆಲ ಕಾಲ ಉಪಸ್ಥಿತರಾಗಲಿದ್ದಾರೆ. ಏಕೆಂದರೆ ನ್ಯಾ ಗಂಗೂಲಿ ಅವರು ಇಂದು ನಿವೃತ್ತಿಯಾಗಲಿದ್ದಾರೆ.

ಈ ಮಧ್ಯೆ ಇಡೀ ಹಗರಣವನ್ನು ರಾಜಾ ತಲೆಗೆ ಕಟ್ಟಲು ಹರ ಸಾಹಸಪಡುತ್ತಿರುವ ಕೆಂದ್ರ ಸರಕಾರ ಚಿದಂಬರಂ ಅವರದ್ದು ಏನೂ ಪಾತ್ರವಿಲ್ಲ ಎಂದೇ ವಾದಿಸುತ್ತಾ ಬಂದಿದೆ.

English summary
The Supreme Court will pronounce on Thursday (Feb 2) its verdict on three important issues in the 2G case — the alleged role of P. Chidambaram, during his tenure as Finance Minister, in fixing spectrum price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X