ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳು 8ಕ್ಕೇ ಆರಂಭ: ಟ್ರಾಫಿಕ್ ಸಲೀಂಗೆ ಏನಾಗಿದೆ?

By Srinath
|
Google Oneindia Kannada News

open-bangalore-schools-at-8am-traffic-police-saleem
ಬೆಂಗಳೂರು, ಜ.28: ಬೆಂಗಳೂರು ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ ಎಂಎ ಸಲೀಂ ಮತ್ತೆ ಸುದ್ದಿಗೆ ಬಂದಿದ್ದಾರೆ. ಆದರೆ ಈ ಬಾರಿಯೂ ವಿವಾದಕ್ಕೆ ಗ್ರಾಸ ಒದಗಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಬೆಳಗ್ಗೆ 8 ಗಂಟೆಗೇ ಆರಂಭಿಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ಇದಕ್ಕೆ ಶಿಕ್ಷಣ ಸಂಸ್ಥೆಗಳು ಭಾರಿ ಅಪಸ್ವರವೆತ್ತಿವೆ. 2005ರಲ್ಲಿಯೂ ಇಂತಹುದೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪೊಲೀಸರ ಈ ಕ್ರಮದಿಂದ ಟ್ರಾಫಿಕ್ ಒತ್ತಡ ನೀಗಬಹುದು ಎಂಬುದು ಭ್ರಮೆಯಷ್ಟೆ. ಈ ನಿರ್ಧಾರ ಅವೈಜ್ಞಾನಿಕವೂ ಆಗಿದೆ ಎಂದು ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕಿಡಿಕಾರಿದೆ. ಶಾಲಾ ಮಕ್ಕಳ ಪೋಷಕರೂ ಗರಂ ಆಗಿದ್ದಾರೆ.

ಇನ್ನು ಟೀಚರುಗಳು ಬೆಳಗ್ಗೆ ಅಷ್ಟೊತ್ತಿಗೆ ಮಕ್ಕಳನ್ನು ಶಾಲೆಗಳಲ್ಲಿ ಕೂಡಿಹಾಕುವುದು ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಸಕ್ರಮವಲ್ಲ ಎಂದು ಘೋಷಿಸಿದ್ದಾರೆ. ಆದರೂ ಟ್ರಾಫಿಕ್ ಸಲೀಂ ಸಾಹೇಬರು ಯಾರು ಏನೇ ಹೇಳಲಿ ಮುಂದಿನ ವರ್ಷದಿಂದ ಶಾಲೆಗಳನ್ನು ಬೆಳಗ್ಗೆ 8 ಗಂಟೆಗೇ ತೆರೆಯಿರಿ ಎಂದು ಆಜ್ಞಾಪಿಸಿದ್ದಾರೆ.

ಸದ್ಯದಲ್ಲೇ ಅವೆನ್ಯೂ ರೋಡಿನಲ್ಲಿ ಬಿಎಂಟಿಸಿ ಬಸ್ ನುಗ್ಗಿಸುವುದಾಗಿ ಘೋಷಿಸಿರುವ ಹೆಚ್ಚು'ವರಿ' ಟ್ರಾಫಿಕ್ ಆಯುಕ್ತ ಡಾ ಸಲೀಂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ವಿವಾದಾತ್ಮಕ ನಿರ್ಣಯಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

English summary
In a measure to ease the traffic in Bangalore the Additional Commissioner of Police (Traffic) M A Saleem has taken a bizarre decision. He wants the schools in Bangalore to open at 8 AM from next accademic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X