ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಫೆ.4-5 ಮಕ್ಕಳ ಹಬ್ಬ 'ಬಾಲಸಂಗಮ'

By Prasad
|
Google Oneindia Kannada News

Cultural festival for underprivileged children in Bangalore
ಬೆಂಗಳೂರು, ಫೆ. 2 : ಹಿಂದುಳಿದ ಪ್ರದೇಶಗಳಲ್ಲಿನ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಫೆ.4 ಮತ್ತು 5 ರಂದು ಎರಡು ದಿನಗಳ 'ಬಾಲ ಸಂಗಮ' ಸಾಂಸ್ಕೃತಿಕ ಹಬ್ಬವನ್ನು ಕೇಶವ ಸೇವಾ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿದೆ.

ಕೇಶವ ಸೇವಾ ಸಮಿತಿ ಕಳೆದ ಹಲವಾರು ವರ್ಷಗಳಿಂದ ಹಿಂದುಳಿದ ಪ್ರದೇಶಗಳ ಮಕ್ಕಳಿಗಾಗಿ ಶಿಕ್ಷಣ, ಆರೋಗ್ಯ, ಸ್ವಾವಲಂಬನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ವರ್ಷದ ಕಾರ್ಯಕ್ರಮಗಳನ್ನು ಹಲಸೂರು ಜೋಗುಪಾಳ್ಯದಲ್ಲಿರುವ ಡಾ. ರಾಜ್ ಕುಮಾರ್ ಆಟದ ಮೈದಾನದಲ್ಲಿ ಆಯೋಜಿಸಿದೆ.

ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾದೂ ಪ್ರದರ್ಶನ, ಮಾತಾಡುವ ಬೊಂಬೆ ಪ್ರದರ್ಶನ, ಭಕ್ತ ಪ್ರಹ್ಲಾದ ಹರಿಕಥೆ, ಕೈತುತ್ತು ಮುಂತಾದ ವಿಶಿಷ್ಟ ಚಟುವಟಿಕೆಗಳು ಎರಡು ದಿನಗಳ ಕಾಲ ಜರುಗಲಿವೆ. ಫೆ.4ರ ಸಂಜೆ 5.15ಕ್ಕೆ ಮಕ್ಕಳ ಹಬ್ಬ ಉದ್ಘಾಟನೆಯಾಗಲಿದೆ. ಫೆ.5ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬೆಂಗಳೂರಿನ ಮೇಯರ್ ಶಾರದಮ್ಮ ಗೌರವ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

English summary
Cultural and sports festival 'Bala Sangama' for underprivileged children has been organized by Keshava Seva Samithi, a charitable trust in Bangalore on Feb 4-5, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X