ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಲೈಸೆನ್ಸ್ ಗೋತಾ: ಗ್ರಾಹಕರಿಗೆ ತೊಂದರೆ ಇಲ್ಲ

By Srinath
|
Google Oneindia Kannada News

2g-telecom-licenses-quashed-what-about-customers
ನವದೆಹಲಿ, ಫೆ.2: ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಆಡಳಿತಾವಧಿಯಲ್ಲಿ ವಿತರಿಸಿರುವ ಎಲ್ಲ 2ಜಿ ಲೈಸೆನ್ಸುಗಳನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಆದರೆ ಹೀಗೆ ಸುಪ್ರೀಂ ತಪರಾಕಿ ತಿಂದಿರುವ 122 ಕಂಪನಿಗಳ ಭವಿಷ್ಯವೇನು? ಅದಕ್ಕಿಂತ ಮುಖ್ಯವಾಗಿ ಆ ಕಂಪನಿಗಳ ಗ್ರಾಹಕರ ಪಾಡೇನು? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

ಈ 2ಜಿ ದೂರಸಂಪರ್ಕ ಕಂಪನಿಗಳ ಸೇವೆಗೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಇನ್ನು ನಾಲ್ಕು ತಿಂಗಳೊಳಗಾಗಿ ಈ ಕಂಪನಿಗಳು ಸೇವೆಯನ್ನು ಸ್ಥಗಿತಗೊಳಿಸಬೇಕು. ಅಂದರೆ ಈ ಕಂಪನಿಗಳ ಸೇವೆ ಪಡೆಯುತ್ತಿರುವ ಗ್ರಾಹಕರು ಬೇರೆ ಕಂಪನಿಗಳ ಸೇವೆಗೆ ವರ್ಗಾವಣೆ ಪಡೆಯಬೇಕು. ಇಂತಹ ಗ್ರಾಹಕರಿಗೆ Mobile number portability (MNP) ಆಪದ್ಬಾಂಧವನಂತೆ ನೆರವಿಗೆ ಧಾವಿಸಲಿದೆ.

ಮುಖ್ಯವಾಗಿ Idea Cellular, Tata Teleservices, Uninor, Loop Telecom, Videocon, S Tel ಕಂಪನಿಗಳ ಸೇವೆಗಳು ಬಂದ್ ಆಗಲಿವೆ. ಆದ್ದರಿಂದ ಈ ಕಂಪನಿಗಳ ಚಂದಾದಾರರು ತಕ್ಷಣ ಬೇರೆ ವಿಶ್ವಾಸಾರ್ಹ ಕಂಪನಿಗಳ ಕದ ತಟ್ಟಬಹುದು. ಇನ್ನು, ಈ ಮಾನಗೇಡಿ ಕಂಪನಿಗಳು ಮೇಲ್ಮನವಿ ಸಲ್ಲಿಸಿದರೆ ಅವುಗಳ ಸೇವೆ ಮತ್ತೆ ಚಾಲ್ತಿಗೆ ಬರುತ್ತದಾ ಅಂದರೆ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ ಇಂತಹ ಖಡಕ್ ತೀರ್ಪು ನೀಡಿರುವುದು ಖುದ್ದು ಸುಪ್ರೀಂಕೋರ್ಟ್. ಸೋ ಸೇವೆ ರದ್ದುಗೊಳಿಸಿರುವುದನ್ನು ವಾಪಸ್ ಪಡೆಯುವ ಸಾಧ್ಯತೆ ತುಂಬಾ ಕ್ಷೀಣವಾಗಿದೆ.

ಗಮನಾರ್ಹವೆಂದರೆ ಇಂತಹ ಮಾನಗೇಡಿ ಕಂಪನಿಗಳಿಗೆ ಸುಪ್ರೀಂಕೋರ್ಟ್ ದಂಡ ವಿಧಿಸಿದೆ. ಅದು 5 ಕೋಟಿ ರು. ನಿಂದ ಆರಂಭವಾಗಿ 50 ಕೋಟಿ ರು. ವರೆಗೂ ಇದೆ. ಈ ಹಣವನ್ನು ಕೋರ್ಟ್ ವೆಚ್ಚಕ್ಕೆ ಮತ್ತು ರಕ್ಷಣಾ ಸೇವೆಗಳಿಗೆ ವಿನಿಯೋಗಿಸಬೇಕು ಎಂದೂ ಕೋರ್ಟ್ ಹೇಳಿದೆ.

English summary
Even though the Supreme Court Thursday ordered cancellation of 122 telecom licences, customers will not be affected much as firms have been given four months to cease operations, allowing ample time for an arrangement so users can shift through Mobile number portability (MNP) to another service provider.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X