ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕನ್ನಡಿಗರಿಗೆ ಡಿವಿಜಿ ಕಗ್ಗ ವಾಚನ ಸ್ಪರ್ಧೆ

By Mahesh
|
Google Oneindia Kannada News

DV Gundappa
ಬೆಂಗಳೂರು, ಫೆ.1: ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ 125ನೆಯ ಜನ್ಮದಿನಾಚರಣೆ ಪ್ರಯುಕ್ತ ಸಮಾಜ ಸೇವಕರ ಸಮಿತಿ, ಬೆಂಗಳೂರು ಇವರು ಐಟಿ ಉದ್ಯೋಗಿಗಳಿಗಾಗಿ ಮಂಕುತಿಮ್ಮನ ಕಗ್ಗ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು ಪ್ರತಿವರ್ಷದಂತೆ ಈವರ್ಷ ಕೂಡ ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಚಾರ ಮಂಡನೆ, ನೃತ್ಯ ರೂಪಕ, ಮಂಕುತಿಮ್ಮನ ಕಗ್ಗದ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಗ್ಗ ಸ್ಪರ್ಧೆಯ ನಿಯಮಗಳು ಹೀಗಿದೆ:
* ತಂಡವೊಂದರಲ್ಲಿ ಕನಿಷ್ಠ ಇಬ್ಬರು ಭಾಗವಹಿಸಬೇಕು, ಗರಿಷ್ಠ ಮೂವರು ಇರಬಹುದು.
* ಮಂಕುತಿಮ್ಮನ ಕಗ್ಗದ ಯಾವುದೇ ಒಂದು ಪದ್ಯವನ್ನು ಪೂರ್ತಿಯಾಗಿ ಹಾಡಬೇಕು.
* ತಂಡವೊಂದಕ್ಕೆ 5 ನಿಮಿಷಗಳ ಸಮಯಾವಕಾಶವಿರುತ್ತದೆ.
* ಅಷ್ಟರಲ್ಲಿ ಅತಿ ಹೆಚ್ಚು ಕಗ್ಗಗಳನ್ನು ಸ್ಮೃತಿಶಕ್ತಿಯಿಂದ ಹಾಡುವ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತದೆ.
* ರಾಗ ಬದ್ಧವಾದ ಹಾಡುಗಾರಿಕೆಗೆ, ಭಾವಾಭಿನಯಕ್ಕೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತದೆ.
*. ಹೀಗೆ ಮುಂದಿನ ಸುತ್ತುಗಳಲ್ಲಿ ಅರ್ಹ ತಂಡಗಳನ್ನು ಆರಿಸುತ್ತ ಅಂತಿಮ ಸುತ್ತಿನಲ್ಲಿ ಎರಡು ತಂಡಗಳನ್ನು ಆರಿಸಲಾಗುತ್ತದೆ.

ಮೊದಲನೆ ಮತ್ತು ಎರಡನೆ ಬಹುಮಾನಗಳನ್ನು 17 ಮಾರ್ಚ್ ರಂದು ನಡೆಯುವ ಡಿವಿಜಿಯವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನೀಡಲಾಗುವುದು ಮತ್ತು ಕಗ್ಗಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಅವಕಾಶವಿರುತ್ತದೆ.

* ತಂಡವೊಂದಕ್ಕೆ ಪ್ರವೇಶ ಶುಲ್ಕ ರೂ 50/-
* ತಂಡಗಳು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ ಫೆ.7,2012
* ಸ್ಪರ್ಧೆ ನಡೆಯುವ ದಿನಾಂಕ ಫೆ.11,12, 18, 19

ಸಮಾಜ ಸೇವಕರ ಸಮಿತಿಯನ್ನು ಸಂಪರ್ಕಿಸಿ:
#171, ಸುಬ್ಬರಾಮ್ ಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಬಸ್ ನಿಲ್ದಾಣದ ಹಿಂಭಾಗ, ಬಸವನಗುಡಿ, ಬೆಂಗಳೂರು-560 004
* ರಾಜ್ ಕುಮಾರ್ : 94481 71069
* ರಾಘವೇಂದ್ರ ಅಗರ್ಖೇಡ್ : 98866 83008
* ಇಮೇಲ್: [email protected]

English summary
On the eve of Writer DV Gundappa's 125th birthday celebration Mankutimmana Kagga Recital competition for Bangalore IT employees has been organised by Samaja Sevakara Samithi, Basavanagudi, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X