ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಐಟಿ ಇಂಜಿನಿಯರುಗಳಿಗೆ ಇನ್ಫಿ ತರಬೇತಿ ಭಾಗ್ಯ

By Srinath
|
Google Oneindia Kannada News

Infosys-to-train-it-engg-j-k-youths (pic-teck.in)
ಬೆಂಗಳೂರು, ಫೆ.1: ಪ್ರತಿವರ್ಷ ಜಮ್ಮು ಕಾಶ್ಮೀರದ ಐಟಿ ಇಂಜಿನಿಯರುಗಳಿಗೆ ತರಬೇತಿ ನೀಡಲು ಬೆಂಗಳೂರಿನ ಐಟಿ ದಿಗ್ಗಜ ಇನ್ಫೋಸಿಸ್ ಮುಂದಾಗಿದೆ. ಐಟಿ ಆಧಾರಿತ ಅತ್ಯಾಧುನಿಕ ಸೇವಾ ಕ್ಷೇತ್ರದಲ್ಲಿ ವರ್ಷಕ್ಕೆ ಕನಿಷ್ಠ 100 ಯುವಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಪ್ರಕಟಿಸಿದ್ದಾರೆ.

ಜಮ್ಮು ಕಾಶ್ಮೀರದ ವಿಶೇಷ ಔದ್ಯಮಿಕ ಕಾರ್ಯಸೂಚಿ ಅನುಮೋದನೆ ಸಮಿತಿಯು ಇನ್ಫೋಸಿಸ್ ಕಂಪನಿಯ ಪ್ರಸ್ತಾವನೆಗೆ ಕಳೆದ ಜನವರಿ 11ರಂದು ಅಂಕಿತ ಹಾಕಿದೆ ಎಂದು ಅವರು ಹೇಳಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಷನ್ ಮತ್ತು ಇಂಜಿನಿಯಿರಿಂಗ್ ವಿದ್ಯಾರ್ಥಿಗಳಿಗೆ ಈ ಸೇವಾ ಭಾಗ್ಯ ದೊರಕಲಿದೆ.

ಈ ಯೋಜನೆಗೆ Infosys Ltd ಜತೆಗೆ Future Group, Tata Consultancy Service (TCS) ಮತ್ತು Confederation of Indian Industry (CII) ಅಂಕಿತ ಹಾಕಿವೆ. ಜಮ್ಮು ಕಾಶ್ಮೀರದ ಐಟಿ ಕಾಲೇಜುಗಳ ಬಹುದಿನದ ಬೇಡಿಕೆ ಇದಾಗಿದೆ. ಕಣಿವೆಯಲ್ಲಿ ಸಾವಿರಾರು ನಿರುದ್ಯೋಗಿ ಉದ್ಯೋಗಿಗಳಿಗೆ ಇದು ಬಾಳಬೆಳಕಾಗಲಿದೆ. ಜತೆಗೆ ಅಶಾಂತಿಯ ಬೀಡಾದ ಕಣಿವೆಯಲ್ಲಿ ಸರಕಾರದ ತಲೆನೋವೂ ಕಡಿಮೆಯಾಗಲಿದೆ.

English summary
Bangalore-based Infosys including other IT-majors Future Group, Tata Consultancy Service (TCS), Confederation of Indian Industry (CII) will train atleast 100 engineering students from Jammu and Kashmir every year, said P Chidambaram, Home Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X