ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಗೆ ಇಲ್ಲ ರಿಲೀಫ್; ಮತ್ತೆ ಕೋರ್ಟ್ ಕಂಟಕ

By Srinath
|
Google Oneindia Kannada News

bsy-to-face-prosecution-sirajin-basha-high-court
ಬೆಂಗಳೂರು, ಜ.31: ಭದ್ರಾ ಮೇಲ್ದಂಡೆ ಪ್ರಕರಣದಲ್ಲಿ ಆರೋಪಮುಕ್ತರಾದ ಸಂತಸ ಒಂದು ದಿನವೂ ಆಗಿಲ್ಲ. ಆಗಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ಕೋರ್ಟ್ ಕಂಟಕ ಎದುರಾಗಿದೆ.

ಕಾರಣ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿದ್ದ 2 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ ಜಾರಿ ಮಾಡಿರುವ ಸಮನ್ಸ್ ರದ್ದತಿಗೆ ಯಡಿಯೂರಪ್ಪ ಕೋರಿದ್ದ ಅರ್ಜಿಯನ್ನು ಹೈಕೋರ್ಟಿನ ನ್ಯಾ. ಆನಂದ್ ಅವರ ಏಕಸದ್ಯ ಪೀಠ ವಜಾಗೊಳಿಸಿ, ಕೆಳ ನ್ಯಾಯಾಲಯದ ಆದೇಶದಂತೆ ಪ್ರಕರಣದ ತನಿಖೆ ಮುಂದುವರಿಸಬಹುದು ಎಂದು ಆದೇಶಿಸಿದ್ದಾರೆ.

ಪ್ರಕರಣಗಳು: ಅರ್ಕಾವತಿ ಲೇಔಟ್ ಬಳಿಯ ಗೆದ್ದಲಹಳ್ಳಿ, ದೇವರಚಿಕ್ಕನಹಳ್ಳಿ ಮತ್ತು ಅರಕೆರೆ ಗ್ರಾಮಗಳಲ್ಲಿ ಅಕ್ರಮವಾಗಿ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಆ. 8ರಂದು ಜಾರಿ ಮಾಡಲಾದ ಸಮನ್ಸ್ ಒಂದು; ಉತ್ತರಹಳ್ಳಿ ಮತ್ತು ಅಗರ ಗ್ರಾಮಗಳಲ್ಲಿನ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಆ. 23ರಂದು ಜಾರಿ ಮಾಡಲಾಗಿರುವ ಸಮನ್ಸ್ ಇನ್ನೊಂದು.

English summary
Karnataka ex Chief Minister B.S. Yeddyurappa is to under go prosecution in a case filed by Sirajin Basha in High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X