ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡು ರಸ್ತೇಲಿ ಹುಡ್ಗೀರ ಬೆತ್ತಲೆ ಪೋಸ್ಟರ್

By Mahesh
|
Google Oneindia Kannada News

Bare Posters Indore
ಇಂದೋರ್, ಜ.31: ಇಲ್ಲಿನ ರೀಗಲ್ ಚೌಕದಲ್ಲಿ ಬೆತ್ತಲೆ ಹುಡುಗಿಯರಜೊತೆಗೆ ಅವರ ಸಂಪರ್ಕ ಸಂಖ್ಯೆ ಇರುವ ಪೋಸ್ಟರ್ ಗಳು ರಾರಾಜಿಸುತ್ತಿರುವುದು ಸಾರ್ವಜನಿಕರಿಗೆ ಶಾಕ್ ನೀಡಿದೆ.

ವಿಶ್ವವಿದ್ಯಾಲಯದ ಆವರಣಕ್ಕೆ ಹೊಂದಿಕೊಂಡಂತೆ ಗೋಡೆಯಲ್ಲಿ ಕಾಣಿಸಿಕೊಂಡ ಪೋಸ್ಟರ್ ನಂತರ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದೆ.

ಈ ಚಿತ್ರಗಳು ಅಸಲಿಯೇ ಅಥವಾ ನಕಲಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಚಿತ್ರಗಳ ಜಾಹೀರಾತು ಹಾಕಲು ಪಾಲಿಕೆ ಅನುಮತಿ ಹೇಗೆ ನೀಡಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಪೋಸ್ಟರ್ ಗಳ ಬಗ್ಗೆ ಸುದ್ದಿ ವೈರಸ್ ರೀತಿ ನಗರದಲ್ಲಿ ಹಬ್ಬುತ್ತಿದೆ.

ಯಾರೋ ಅತೃಪ್ತ ಪ್ರೇಮಿ ಅಥವಾ ಮಾನಸಿಕ ಅಸ್ವಸ್ಥನ ಕೈವಾಡ ಇರಬಹುದು ಎಂದು ನಗರ ಪೊಲೀಸರು ಶಂಕಿಸಿದ್ದಾರೆ. ಚಿತ್ರದಲ್ಲಿರುವ ಹುಡುಗಿಯರ ನಂಬರ್ ಗಳು ನಾಟ್ ರೀಚಬಲ್ ಬರುತ್ತಿದೆ. ತನಿಖೆ ಮುಂದುವರೆದಿದೆ ಎಂದು ಡಿಎಸ್ಪಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.

English summary
Bare posters of girls with mobile numbers in the Regal Square area in Madhya Pradesh shocked all and drew attention of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X