ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವಿಜಿ ರಸ್ತೆಗೆ ನುಗ್ಗಲಿವೆ BMTC ಬಸ್ಸುಗಳು

By Srinath
|
Google Oneindia Kannada News

bmtc-buses-may-ply-on-dvg-road-basavangudi
ಬೆಂಗಳೂರು,ಜ.30: ಬೆಂಗಳೂರು ಪೊಲೀಸ್ ಮತ್ತು ಬಿಬಿಎಂಪಿ ಜಂಟಿ ಕಾರ್ಯಾಚರಣೆಯಲ್ಲಿ ಬಸವನಗುಡಿಯ ಪುರಾತನ ಲ್ಯಾಂಡ್ ಮಾರ್ಕ್ ಗಳಲ್ಲಿ ಒಂದಾಗಿದ್ದ ಗಾಂಧಿಬಜಾರ್ ಮಾರುಕಟ್ಟೆಯನ್ನು ನೆಲಸಮ ಮಾಡಿದ್ದಾಯ್ತು. ಟ್ರಾಫಿಕ್ ಪೊಲೀಸರು ಅಲ್ಲಿಂದ ಟಾಪ್ ಗೇರಿನಲ್ಲಿ ಸೀದಾ ಅವೆನ್ಯೂ ರಸ್ತೆಗೆ ನುಗ್ಗಿದ್ದಾರೆ. ಅಲ್ಲಿ ಬಿಎಂಟಿಸಿ ಅಧಿಕಾರಿಗಳಿಗೆ ಪುಂಗಿ ಊದಿ 'ಅವೆನ್ಯೂ ರೋಡಿನಲ್ಲಿ ಬಸ್ ಬಿಡ್ರಲಾ, ನಾವಿದ್ದೀವಿ ಅಂದಿದ್ದಾರೆ'. ಅದೇ ಉಸಿರಿನಲ್ಲಿ ರಿವರ್ಸ್ ಗೇರ್ ಹಾಕಿಕೊಂಡು ಮತ್ತೆ ಬಸವನಗುಡಿಯತ್ತ ನುಗ್ಗುವ ಆಲೋಚನೆಯಲ್ಲಿದ್ದಾರೆ.

(BMTC ಬಸ್ಸಿಗೆ ಸಿಕ್ಕಿ Avenue Road ಪಡ್ಚ: ಇಲ್ಲಿ ಕ್ಲಿಕ್ ಮಾಡಿ)

ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೌತ್ ಕಮರ್ಷಿಯಲ್ ಸ್ಟ್ರೀಟ್ ಆಗಿ ರೂಪಾಂತರವಾಗಿರುವ ಡಿವಿಜಿ ರಸ್ತೆಯಲ್ಲಿ ಬಸ್ ಬಿಡಲು ಟ್ರಾಫಿಕ್ ಪೊಲೀಸರು ಮಂತ್ರಾಲೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ಅವೆನ್ಯೂ ರೋಡಿಗೆ ಹೋಲಿಸಿದಲ್ಲಿ ಡಿವಿಜಿ ರೋಡ್ ಅತ್ಯಂತ ಸುವಿಶಾಲವಾಗಿದೆ. ಅಲ್ಲಿ ಬಸ್ ಓಡಾಡಲು ಅಡ್ಡಿಯೇನು ಇಲ್ಲ.

ಅತ್ತ ಬಸವನಗುಡಿ ಪೊಲೀಸ್ ಠಾಣೆ ಎದುರು ಠಾಗೋರ್ ಸರ್ಕಲ್ ಅಂಡರ್ ಪಾಸ್ ಕಾಮಗಾರಿ ಇನ್ನು ಯಾವ ಕಾಲಕ್ಕೆ ಮುಗಿಯುತ್ತೋ ಅಲ್ಲಿವರೆಗೂ ಪ್ರಯೋಗಾರ್ಥವಾಗಿ ಡಿವಿಜಿ ನಡು ರೋಡಿನಲ್ಲೇ ಬಸ್ ಓಡಿಸಿ' ಎಂದು ಟ್ರಾಫಿಕ್ ಪೊಲೀಸ್ ಆಯುಕ್ತ ಡಾ. ಸಲೀಂ ಅವರು ಬಿಎಂಟಿಸಿಗೆ ಸದ್ಯದಲ್ಲೇ ಒಲವಿನ ಓಲೆ ಕಳಿಸುವ ಲಕ್ಷಣಗಳು ಹೆಚ್ಚಾಗಿವೆ.

English summary
The Bangalore Additional Commissioner of Police (Traffic) M A Saleem who is all set to ply BMTC buses on all roads including the snaking Avenue Road is about to run BMTC buses on DVG Road - Basavangudi also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X