ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BMTC ಬಸ್ಸಿಗೆ ಸಿಕ್ಕಿ Avenue Road ಪಡ್ಚ: ಚಿತ್ರಾವಳಿ

By Srinath
|
Google Oneindia Kannada News

bmtc-buses-avenue-road-down-the-memory-lane-pix
ಬೆಂಗಳೂರು, ಜ.30: ಹೌದು. ಬೆಂಗಳೂರು ಟ್ರಾಫಿಕ್ ಹೆಚ್ಚು'ವರಿ' ಪೊಲೀಸ್ ಆಯುಕ್ತ ಎಂಎ ಸಲೀಂ ಅವರು ಅವೆನ್ಯೂ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಅನುವು ಮಾಡಿಕೊಡಲು ನಿರ್ಧರಿಸಿದ್ದಾರೆ. ಇದರಿಂದ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿಕ್ಕಿ ಅವೆನ್ಯೂ ರಸ್ತೆ ಮತ್ತು ಅಲ್ಲಿನ ವರ್ತಕರು ಪಡ್ಚ ಆಗುವುದು ಶತಃಸಿದ್ಧ. ಅದು ನಮ್ಮ ಕಣ್ಣೆದುರೇ ಸಂಭವಿಸುವ ಮುನ್ನ ವ್ಯಾಪಾರ ವೈಭವದ ಅವೆನ್ಯೂ ರಸ್ತೆಯನ್ನು ಒಮ್ಮೆ ಕಣ್ತುಂಬಿಸಿಕೊಳ್ಳಿ. ಇಲ್ಲಿ ಕ್ಲಿಕ್ ಮಾಡಿ (Pics by Sadhu).

25-30 ಅಡಿಯಷ್ಟೆ ಅಗಲವಿರುವ ಈ ರೋಡಿನಲ್ಲಿ ಫೆಬ್ರವರಿಯಿಂದ ಸಾಲು ಸಾಲು ಬಿಟಿಎಸ್ ಬಸ್ಸುಗಳು ಸಂಚರಿಸಲಿವೆ. ಹೌದು ಸಾಲು ಸಾಲೇ. ಏಕೆಂದರೆ ಇಲ್ಲಿ ಓವರ್ ಟೇಕ್ ಮಾಡೋಕ್ಕೆ ಅಥವಾ ಒಂದರ ಪಕ್ಕ ಒಂದು ಹೋಗುವುದಕ್ಕೆ ಅವಕಾಶವೇ ಇಲ್ಲ. 'ಇಲ್ಲಿ ಬಿಟಿಎಸ್ ಓಡಾಡೋ ಹಾಗಿದ್ದರೆ ದಿನಕ್ಕೆ ಕನಿಷ್ಠ 5-10 ಅಪಘಾತಗಳು ಗ್ಯಾರಂಟಿ' ಎಂದೇ ಎಲ್ಲರೂ ಮಾತನಾಡಿಕೊಳ್ಲುತ್ತಿದ್ದಾರೆ.

ಟ್ರಾಫಿಕ್ ಪೊಲೀಸ್ ಅಧಿನಾಯಕ ಡಾ. ಸಲೀಂ ಸಾಹೇಬರೇ ಇಂತಹ ನಿರ್ಧಾರಕ್ಕೆ ಬಂದಿರುವಾಗ ಅವರ ಕೈಕೆಳಗಿನ ಅಧಿಕಾರಿಗಳು ಏನು ಮಾಡೋಕ್ಕೆ ಆಗುತ್ತೆ. ಅದಕ್ಕೆ ಇಲ್ಲಿನ ಟ್ರಾಫಿಕ್ ಪೊಲೀಸರೂ ತೆಪ್ಪಗೆ ಕೋಲೇ ಬಸವನ ತರ ತಲೆದೂಗುತ್ತಿದ್ದಾರೆ. ಆದರೆ ವರ್ತಕರು ಮಾತ್ರ ಸುತರಾಂ ಒಲ್ಲೆ ಅನ್ನುತ್ತಿದ್ದಾರೆ.

English summary
The snaking Avenue Road is about to see one more addition on its chaotic stretch from next week: BMTC buses. Whats wrong with Additional Commissioner of Police (Traffic) M A Saleem who took this bizarre decision!? The traders on the road are up against Police decision. Here we run the pictures down the memory lane of Avenue Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X