ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಕೆಲಸಕ್ಕೆ ಇಸ್ರೋ ಮಾಧವನ್ ರಾಜೀನಾಮೆ

By Srinath
|
Google Oneindia Kannada News

madhavan-nair-quits-as-iit-patna-chairman
ಬೆಂಗಳೂರು, ಜ.28: ಲಕ್ಷಾಂತರ ಕೋಟಿ ರು. ಆಂಟ್ರಿಕ್ಸ್ ಹಗರಣದಲ್ಲಿ ಸಿಲುಕಿ ಅಂಧಃಪತನ ಕಂಡಿರುವ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಸರಕಾರಿ ನೌಕರಿಗೆ ಮಾಧವನ್ ಅವರನ್ನು ಅನರ್ಹಗೊಳಿಸಿ, ಮೂರು ದಿನಗಳ ಹಿಂದೆ ಕೇಂದ್ರ ಸರಕಾರ ನಿರ್ಬಂಧ ಹೇರಿತ್ತು.

ಕೇಂದ್ರ ಸರಕಾರದ ಅಧೀನದಲ್ಲಿರುವ ಪಟನಾ ಐಐಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮಾಧವನ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಸರಕಾರದಿಂದ ನನಗೆ ಯಾವುದೇ ಆದೇಶ ಪತ್ರ ತಲುಪಿಲ್ಲ. ಆದರೂ ಬಹಿರಂಗವಾಗಿ ಮಾಧ್ಯಮಗಳ ಮೂಲಕ ವಿಷಯ ತಿಳಿದಿದೆ. ಆದ್ದರಿಂದ ರಾಜೀನಾಮೆ ನೀಡಿರುವೆ ಎಂದು ಮಾಧವನ್ ತಿಳಿಸಿದ್ದಾರೆ. ಶುಕ್ರವಾರವೇ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಹಗರಣದ ತನಿಖಾ ವರದಿ ಮತ್ತು ನನ್ನನ್ನು ಸರಕಾರಿ ಉದ್ಯೋಗದಿಂದ ನಿರ್ಬಂಧಿಸಿ ಸರಕಾರ ಹೊರಡಿಸಿರುವ ಆದೇಶ ಪ್ರತಿಯನ್ನು ಕೋರಿ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿರುವೆ. ಅದನ್ನು ಅಧ್ಯಯಿಸಿ, ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಮಾಧವನ್ ಸ್ಪಷ್ಟಪಡಿಸಿದರು.

ಇಸ್ರೋನ ಅಂಗಸಂಸ್ಥೆಯಾದ ಆಂಟ್ರಿಕ್ಸ್ ಮತ್ತು ದೇವಾಸ್ ಮಲ್ಟಿಮೀಡಿಯಾ ಎಂಬ ಖಾಸಗಿ ಸಂಸ್ಥೆ ನಡುವೆ ನಡೆದಿರುವ ಸ್ಪೆಕ್ಟ್ರಂ ಒಪ್ಪಂದದಿಂದ ಸರಕಾರದ ಬೊಕ್ಕಸಕ್ಕೆ 2,00,000 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಮಹಾಲೆಕ್ಕ ಪರಿಶೋಧಕ ಸಂಸ್ಥೆ (ಸಿಎಜಿ) ತಿಳಿಸಿತ್ತು. ಹಗರಣ ನಡೆದ ಸಂದರ್ಭದಲ್ಲಿ ಮಾಧವನ್ ಇಸ್ರೋ ಅಧ್ಯಕ್ಷಾರಾಗಿದ್ದರು.

English summary
In the eye of a storm, former ISRO Chairman G Madhavan Nair has stepped down as Chairman of the Board of Governors of IIT-Patna. Nair, who has been barred from holding any government post for his alleged role in the controversial Antirx-Devas deal, was in Patna on Friday to bid farewell to his colleagues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X