ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವೆನ್ಯೂ ರಸ್ತೆ ವ್ಯಾಪಾರಿಗಳು ಕೆಂಡಾಮಂಡಲ

By Srinath
|
Google Oneindia Kannada News

 bmtc-buses-to-ply-on-avenue-road (Pic by Sadhu)
ಬೆಂಗಳೂರು, ಜ.28: ಬ್ಲಾಕ್ ಅಂಡ್ ವೈಟ್ ಜಮಾನಾದಲ್ಲಿ ಅವೆನ್ಯೂ ರಸ್ತೆಯಲ್ಲಿ ಆಗೊಂದು ಈಗೊಂದು ಬಸ್ಸು ಸಂಚರಿಸಿದ್ದು ನಿಜ. ಕುತೂಹಲದ ಸಂಗತಿಯೆಂದರೆ ಮೈಸೂರು ಮಹಾರಾಜರೇ ತಮ್ಮ ವಂದಿಮಾಗಧರೊಂದಿಗೆ ಈ ರಸ್ತೆಯಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದರು. ರಾಜ ಮಾರ್ಗದಲ್ಲಿ ಓಡಾಡಿ ಅಭ್ಯಾಸವಿದ್ದ ಮಹಾರಾಜರಿಗೆ ಅವೆನ್ಯೂ ರಸ್ತೆ ನಿಜಕ್ಕೂ ಇಕ್ಕಟ್ಟಿಕ್ಕಟ್ಟು ಅನಿಸಿತ್ತು. ಅದಕ್ಕೇ ಸುತರಾಂ ಈ ರಸ್ತೆಯಲ್ಲಿ ಹೋಗೋದು ಬೇಡ ಎಂದು ಅಲವತ್ತುಕೊಳ್ಳುತ್ತಿದ್ದರು.

ಈಗ್ಗೆ 2-3 ದಶಕಗಳ ಹಿಂದೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬೆಳಗ್ಗೆ 10ರಿಂದ ರಾತ್ರಿ 10 ರವರೆಗೂ ಗಿಜಿಗುಡುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಿಸಬೇಕೆಂದರೆ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ನೈಪುಣ್ಯ, ಚಾಕಚಕ್ಯತೆಯು ಸವಾರರಿಗೆ ಅನಿವಾರ್ಯ.

ಇನ್ನು ಈಗಿನ ತಲೆಮಾರಿನವರು (ಬಹುಶಃ ಸಲೀಂರನ್ನೂ ಸೇರಿಸಿಕೊಂಡು) ಅವೆನ್ಯೂ ರಸ್ತೆಯಲ್ಲಿ ಬಸ್ ಓಡಾಡಿದ್ದನ್ನೇ ನೋಡಿಲ್ಲ. ಅಂಥಾದ್ದರಲ್ಲಿ ಇದೇನಿದು ಪೊಲೀಸರ ಅವಿವೇಕದ ನಿರ್ಧಾರ?

ಇತ್ತೀಚೆಗೆ ರಸ್ತೆಯನ್ನು ಸ್ವಲ್ಪಮಟ್ಟಿಗೆ ಅಗಲೀಕರಿಸಿದಾಗಲೇ ಇಲ್ಲಿನ ವ್ಯಾಪಾರಿಗಳು ಹೈರಾಣಗೊಂಡಿದ್ದರು. ಅಂಥಾದ್ದರಲ್ಲಿ ಹಾವಿನಂತೆ ಬಳಸಿಕೊಂಡು ಹೋಗುವ ಈ ರಸ್ತೆಯಲ್ಲಿ ಯಾವ ಪುರುಷಾರ್ಥಕ್ಕಾಗಿ ಪೊಲೀಸರು ಬಸ್ ಓಡಾಟಕ್ಕೆ ಅನುಮತಿ ನೀಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಬ್ರಿಟಿಷರ ಕಾಲದಿಂದಲೂ ಅಪ್ಪಟ ವ್ಯಾಪಾರಿ ಕೇಂದ್ರವಾಗಿರುವ ಅವೆನ್ಯೂ ರಸ್ತೆಗೆ ಈಗ ನಿಜಕ್ಕೂ ಇಂತಹ ದುರ್ಗತಿ ಒದಗಬಾರದಿತ್ತು. ಟ್ರಾಫಿಕ್ ಹೆಚ್ಚು'ವರಿ' ಆಯುಕ್ತ ಎಂಎ ಸಲೀಂ ಅವರು ಸ್ವಲ್ಪ ಇತ್ತ ಯೋಚಿಸುವಂತಾಗಲಿ.

English summary
The snaking Avenue Road is about to see one more addition on its chaotic stretch from next week: BMTC buses. The experiment was carried out rather quietly on Wednesday and Thursday. And now, Bangalore Traffic Police and BMTC authorities will route buses from City Market to Mysore Bank Circle through this road from next week. But the traders are up against Police decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X