ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ದೇವತೆಗಳು ವಿಲಕ್ಷಣ- ಅಮೆರಿಕ ಆಪೋಶನ

By Srinath
|
Google Oneindia Kannada News

hindus-offended-nbc-chicago-website-deities-weird
ಶಿಕಾಗೊ, ಜ.27: ಅಮೆರಿಕದ ಟಿ.ವಿ. ಚಾನೆಲೊಂದು ಹಿಂದೂ ದೇವತೆಗಳನ್ನು 'ವಿಲಕ್ಷಣ' ಎಂದು ಕರೆದು ವಿವಾದ ಸೃಷ್ಟಿಸಿದೆ. ಚಾನೆಲ್‌ನ ವೆಬ್‌ಸೈಟಿನಲ್ಲಿ ಹಾಕಿರುವ ಕ್ರೀಡಾ ವೀಕ್ಷಕ ವಿವರಣೆಯಲ್ಲಿ ಹಿಂದೂ ದೇವತೆಗಳನ್ನು ವಿಲಕ್ಷಣ ಎಂದು ಕರೆದು ಅಪಮಾನಿಸಲಾಗಿದೆ.

ಎನ್‌ಬಿಸಿ ಶಿಕಾಗೊ ಚಾನೆಲ್‌ನ ವೆಬ್‌ಸೈಟಿನಲ್ಲಿ ಐಸ್‌ ಹಾಕಿ ಪಂದ್ಯದ ಫ‌ಲಿತಾಂಶವನ್ನು ಬಣ್ಣಿಸಲು ಹಿಂದೂ ದೇವತೆಗಳನ್ನು ಬಳಸಿಕೊಳ್ಳಲಾಗಿದೆ. ಬ್ಲ್ಯಾಕ್‌ಹಾಕ್ಸ್‌ ಎನ್ನುವ ತಂಡವನ್ನು ಪ್ರಿಡೇಟರ್ ಎನ್ನುವ ತಂಡ 3-1 ಅಂತರದಲ್ಲಿ ಸೋಲಿಸಿರುವುದನ್ನು 'ವಿಲಕ್ಷಣ ಹಿಂದೂ ದೇವರುಗಳು ವಿಶ್ವವನ್ನು ಆಪೋಷನ ತೆಗೆದುಕೊಂಡಂತೆ' ಎಂದು ಬಣ್ಣಿಸಲಾಗಿದೆ.

ಇಲ್ಲಿರುವ ಹಿಂದೂಗಳು ಈ ಅವಮಾನವನ್ನು ತೀವ್ರವಾಗಿ ಪ್ರತಿಭಟಿಸಿ ವೆಬ್‌ಸೈಟಿನಿಂದ ಈ ಹೇಳಿಕೆಯನ್ನು ಹಿಂದೆಗೆದು ಕ್ಷಮೆ ಕೇಳಬೇಕೆಂದು ಚಾನೆಲ್‌ನ್ನು ಒತ್ತಾಯಿಸಿದ್ದಾರೆ. ಜಗತ್ತಿನಾದ್ಯಂತವಿರುವ ಸುಮಾರು 1 ಶತಕೋಟಿ ಹಿಂದೂಗಳು ಪ್ರತಿದಿನ ತಮ್ಮ ದೇವರುಗಳನ್ನು ಪೂಜಿಸುತ್ತಾರೆ. ಹಿಂದೂಗಳ ದೇವರುಗಳನ್ನು ವಿಲಕ್ಷಣ ಎಂದು ಕರೆದಿರುವುದರಿಂದ ಅವರ ಧಾರ್ಮಿಕ ಭಾವನೆಗೆ ನೋವಾಗಿದೆ ಎಂದು ನೇವಾಡದ ಹಿಂದೂ ಸಮುದಾಯದ ನಾಯಕ ರಾಜನ್‌ ಝೆಡ್‌ ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿ ದೇವರುಗಳಿಗೆ ಪೂಜ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಹಿಂದೂಗಳ ದೇವರು ಅಥವಾ ಪರಿಕಲ್ಪನೆಯನ್ನು ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಅಸಮರ್ಪಕವಾಗಿ ಬಳಸುವುದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯಾಗುತ್ತದೆ ಎಂದು ಝೆಡ್‌ ಹೇಳಿದ್ದಾರೆ. (PTI)

English summary
The commentary on an ice hockey match published on NBC Chicago website yesterday titled 'Why a 3-1 Blackhawks Loss Isn't So Bad', detailing Nashville Predators beating Chicago Blackhawks 3-1, said Predators were 'swallowing up space like some weird Hindu god.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X