ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆ ಅಂತ್ಯಕ್ರಿಯೆಗೆ ಮಧು ಗೂಂಡಾಗಳ ತಂದಿದ್ದ:ಕುಮಾರ

By Srinath
|
Google Oneindia Kannada News

madhu-used-goondas-for-bangarappa-last-rites
ಸೊರಬ, ಜ. 26: ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಅಂತ್ಯಕ್ರಿಯೆ ಸಂದರ್ಭದಲ್ಲಿ ತನ್ನ ಕಿರಿಯ ಸೋದರ ಮಧು ಬಂಗಾರಪ್ಪ ಬೆಂಗಳೂರಿನಿಂದ 25-30 ಜನ ಬಾಡಿಗೆ ಗೂಂಡಾಗಳನ್ನು ಕರೆಸಿದ್ದ ಎಂದು ಬಂಗಾರಪ್ಪನವರ ಹಿರಿಯ ಪುತ್ರ ವಸಂತ್ ಕುಮಾರ ಬಂಗಾರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ ಬಂಗಾರಪ್ಪ ಅವರ ತಿಂಗಳ ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ಮಾತನಾಡಿದ ವಸಂತ್ ಕುಮಾರ ಬಂಗಾರಪ್ಪ ಈ ಮಾಹಿತಿ ನೀಡಿದರು. ಅಂತ್ಯಕ್ರಿಯೆ ಸ್ಥಳಕ್ಕೆ ಗೂಂಡಾಗಳು ಬಂದಿರುವ ಬಗ್ಗೆ ಪೊಲೀಸರು ನನಗೆ ಹೇಳಿದರು. ಜತೆಗೆ, ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆಯೂ ತಾಕೀತು ಮಾಡಿದರು ಎಂದು ಕುಮಾರ ಬಂಗಾರಪ್ಪ ಹೇಳಿದರು.

ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲಿ ಇಡೀ ಕುಟುಂಬವೇ ನನ್ನನ್ನು ದೂರ ಉಳಿಯುವಂತೆ ಮಾಡಿತ್ತು. ಕುಟುಂಬದಲ್ಲಿ ಕೆಲವು ವೈಮನಸ್ಸುಗಳು ಬರುವುದು ಸಹಜ. ಾದರೆ ಅದನ್ನ ದೊಡ್ಡದು ಮಾಡುವುದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಲೆಕ್ಕಾಚಾರದ ಮಾತು ನುಡಿದರು.

English summary
Kumar Bangarappa who was asked not to perform his father Bangarappa's last rites has claimed that his younger brother Madhu had brought 25-30 goondas from Bangalore to Bangarappa's last rites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X