ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧವನ್ ಗೆ ಉರುಳಾದ 200000 ಕೋಟಿ ರು ಹಗರಣ

By Srinath
|
Google Oneindia Kannada News

madhavan-nair-barred-govt-jobs-antrix-devas-deal
ಬೆಂಗಳೂರು, ಜ.25: Chandrayan I ಅಂತಹ ಯಶಸ್ವಿ ಅಂತರಿಕ್ಷ ಯೋಜನೆಯನ್ನು ಕೈಗೊಂಡು ಭಾರತದ ಪತಾಕೆಯನ್ನು ಚಂದ್ರನೆತ್ತರಕ್ಕೆ ಕೊಂಡೊಯ್ದಿದ್ದ ಮಾಧವ ನಾಯರ್, 2,00,000 ಕೋಟಿ ರು. ಹಗರಣದಲ್ಲಿ ಸಿಲುಕಿ ಇದೀಗ ಅಂಧಃಪತನ ಕಂಡಿದ್ದಾರೆ.

ಏನಿದು ಪ್ರಕರಣ: ಇಸ್ರೋನ ಅಂಗಸಂಸ್ಥೆಯಾದ ಆಂಟ್ರಿಕ್ಸ್ ಮತ್ತು ದೇವಾಸ್ ಮಲ್ಟಿಮೀಡಿಯಾ ಎಂಬ ಖಾಸಗಿ ಸಂಸ್ಥೆ ನಡುವೆ ನಡೆದಿರುವ ಸ್ಪೆಕ್ಟ್ರಂ ಒಪ್ಪಂದದಿಂದ ಸರಕಾರದ ಬೊಕ್ಕಸಕ್ಕೆ 2,00,000 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಮಹಾಲೆಕ್ಕ ಪರಿಶೋಧಕ ಸಂಸ್ಥೆ (ಸಿಎಜಿ) ತಿಳಿಸಿತ್ತು.

ಒಪ್ಪಂದದ ಅನುಸಾರ ದೇವಾಸ್ ಕಂಪನಿಗಾಗಿ ಎರಡು ಉಪಗ್ರಹಗಳನ್ನು ಉಡಾವಣೆ ಮಾಡುವ ಜವಾಬನ್ದಾರಿಯನ್ನು ಇಸ್ರೊ ಹೊತ್ತಿತ್ತು. ಆದರೆ ಇದರ ಒಳಸುಳಿ ಏನೆಂದರೆ 20 ವರ್ಷಗಳ ಕಾಲ ದುಬಾರಿ ಎಸ್-ಬ್ಯಾಂಡ್‌ನ 70 ಮೆಗಾಹರ್ಟ್ಸ್ ಸ್ಪೆಕ್ಟ್ರಂಅನ್ನು ಅಭಾದಿತವಾಗಿ ಬಳಸಿಕೊಳ್ಳಲು ದೇವಾಸ್‌ಗೆ ಅನುವು ಮಾಡಿಕೊಡಲಾಗಿದೆ. ಇದರಿಂದ ಖಜಾನೆಗೆ 2 ಲಕ್ಷ ಕೋಟಿ ರೂ. ನಷ್ಟವುಂಟಾಗಿದೆ ಎಂದು ಸಿಎಜಿ ತಿಳಿಸಿತ್ತು.

ಸ್ಪರ್ಧಾತ್ಮಕ ಬಿಡ್ಡಿಂಗ್ ನಡೆಸದೆ ನೇರವಾಗಿ ದೇವಾಸ್‌ಗೆ ದುಬಾರಿ ಎಸ್-ಬ್ಯಾಂಡ್ ಸ್ಪೆಕ್ಟ್ರಂಅನ್ನು ಹಂಚಿದ್ದಾದರೂ ಹೇಗೆ? ಸಾರ್ವಜನಿಕ ಹಣದಲ್ಲಿ ದೇವಾಸ್‌ಗೆ ಉಪಗ್ರಹಗಳನ್ನು ನಿರ್ಮಿಸಿಕೊಟ್ಟಿದ್ದಾದರೂ ಏಕೆ? ಇಂತಹ ಬೃಹತ್ ಯೋಜನೆಯ ಲೆಕ್ಕವನ್ನು ಮರೆ ಮಾಚಿದ್ದಾದರೂ ಏಕೆ? ಎಂದು ಸಿಎಜಿ ಬಾಹ್ಯಾಕಾಶ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

ದಾಖಲಾರ್ಹವೆಂದರೆ, 2010ರಲ್ಲಿ ಇದೇ ತರಂಗಗುಚ್ಛದ ಕೇವಲ 15 ಮೆಗಾಹರ್ಟ್ಸ್‌ಅನ್ನು ಹರಾಜು ಹಾಕಿದಾಗ ಸರಕಾರಕ್ಕೆ 67,719 ಕೋಟಿ ರೂ. ಹರಿದುಬಂದಿತ್ತು. 2010ರ ಜುಲೈನಲ್ಲಿ ಬಾಹ್ಯಾಕಾಶ ಆಯೋಗ ಒಪ್ಪಂದದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಒಪ್ಪಂದವನ್ನು ಕೈಬಿಡುವಂತೆಯೂ ಸೂಚಿಸಿತ್ತು.

English summary
Taking action in the controversial Antrix-Devas deal, government has barred former ISRO chief G Madhavan Nair and three other eminent space scientists from holding any government jobs. The action comes in the wake of the controversial deal in which a private company was allotted scarce S band spectrum by ISRO allegedly in violation of rules. The Antrix Devas deal details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X