ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಟ್ರಿಕ್ಸ್ ಡೀಲ್: ಇಸ್ರೋ ಮಾಧವನ್ ನಾಯರ್ ಮೇಲೆ ನಿಷೇಧ

By Srinath
|
Google Oneindia Kannada News

isro-g-madhavan-nair-barred-from-govt-jobs
ಬೆಂಗಳೂರು, ಜ.25: ಕಳೆದ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿದ್ದ 2,00,000 ಕೋಟಿ ರು. ಹಗರಣದ ಹಿನ್ನೆಲೆಯಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಮೇಲೆ ಕೇಂದ್ರ ಸರಕಾರ ಇದೀಗ ನಿಷೇಧ ಹೇರಿದೆ. ಹಗರಣ ನಡೆದಾಗ ಮಾಧವನ್ ನಾಯರ್ ಇಸ್ರೋದ ಮುಖ್ಯಸ್ಥರಾಗಿದ್ದರು.

ಈ ಹಿನ್ನೆಲೆಯಲ್ಲಿ ದೇಶದಲ್ಲಿ ಯಾವುದೇ ಸರಕಾರಿ ನೌಕರಿಗೆ ಅವರನ್ನು ಸೇರಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಸರಕಾರ ಸಾರಿದೆ. ಹಗರಣದ ಬಗ್ಗೆ ತನಿಖೆ ಕೈಗೊಂಡಿದ್ದ ಕೇಂದ್ರದ ಉನ್ನತ ಮಟ್ಟದ ಸಮಿತಿ (HPC) ಈ ಶಿಫಾರಸ್ಸು ಮಾಡಿತ್ತು. ಹಗರಣ ಬೆಳಕಿಗೆ ಬಂದ ದಿನವೇ (ಕಳೆದ ವರ್ಷ ಫೆಬ್ರವರಿ 7) ದಟ್ಸ್ ಕನ್ನಡ ಸವಿಸ್ತಾರ ವರದಿ ಪ್ರಕಟಿಸಿತ್ತು.

ನಾಯರ್ ಜತೆಗೆ ಕೆ. ಭಾಸ್ಕರ ನಾರಾಯಣ (ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ), ಕೆಆರ್ ಶ್ರೀಧರಮೂರ್ತಿ (ಆಂಟ್ರಿಕ್ಸ್ ಸಂಸ್ಥೆಯ ಮಾಜಿ ಎಂಡಿ) ಮತ್ತು ಕೆಎನ್ ಶಂಕರ್ (ಇಸ್ರೋದ ಮಾಜಿ ನಿರ್ದೇಶಕ) ಅವರಿಗೂ ಇದೇ ಗತಿ ಕಾಣಿಸಲಾಗಿದೆ ಎಂದು ಇಸ್ರೋದ ಅಧಿಕೃತ ಮೂಲಗಳು ತಿಳಿಸಿವೆ. ಅಂದಹಾಗೆ, ಮಾಧವನ್ ನಾಯರ್ ಭಾರತದ ಯಶಸ್ವೀ Chandrayan I ಯೋಜನೆಯ ರೂವಾರಿ.

English summary
Taking action in the controversial Antrix-Devas deal, government has barred former ISRO chief G Madhavan Nair and three other eminent space scientists from holding any government jobs. The action comes in the wake of the controversial deal in which a private company was allotted scarce S band spectrum by ISRO allegedly in violation of rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X