ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ದರ ಶೇ.25ರಷ್ಟು ಏರಿಕೆಗೆ ಚಿಂತನೆ

By Mahesh
|
Google Oneindia Kannada News

Indian Railways Modernization
ನವದೆಹಲಿ,ಜ.25: ಪ್ರಧಾನಮಂತ್ರಿ ಸಲಹೆಗಾರರಾಗಿರುವ ಸ್ಯಾಮ್‌ ಪಿತ್ರೋಡ ನೇತೃತ್ವದ ರೈಲ್ವೆ ಆಧುನೀಕರಣ ಮತ್ತು ವಿಕಸನ ಸಮಿತಿ ರೈಲು ಪ್ರಯಾಣ ದರವನ್ನು ಶೇ. 25 ಹೆಚ್ಚಿಸಲು ಸಲಹೆ ನೀಡಿದೆ.

ರೈಲ್ವೆ ಯೋಜನೆಗಳ ಅನುಷ್ಠಾನ, ಇಲಾಖೆ ಅಧುನೀಕರಣಕ್ಕಾಗಿ ನಿಧಿ ಸಂಗ್ರಹಿಸಲು ರಯಾಣ ಟಿಕೇಟ್‌ ದರ ಏರಿಸಲು ಈ ಸಮಿತಿ ಸಲಹೆ ಮಾಡಿದೆ. ಸಂಸತ್ತಿನಲ್ಲಿ ರೈಲ್ವೆ ಬಜೆಟ್‌ ಮಂಡನೆಯಾಗಲಿದೆ. ಇದಕ್ಕೂ ಮುನ್ನ ಆಯೋಗದ ಎದುರು ಸಮಿತ ಮಂಡಿಸಿದ ಶಿಫಾರಸುಗಳ ಚರ್ಚೆಯಾಗಲಿದೆ. ಆದಾಯವನ್ನು ಹೆಚ್ಚಿಸಿಕೊಳ್ಳುವ ಹಲವು ಸಲಹೆಗಳು ಅಂಗೀಕಾರಗೊಳ್ಳುವ ನಿರೀಕ್ಷೆಯಿದೆ.

ರೈಲ್ವೆ ಸುರಕ್ಷೆಗೆ ಸಂಬಂಧಪಟ್ಟಿರುವ ಯೋಜನೆಗಳಿಗೆ 39,836 ಕೋಟಿ ರು ಅವಶ್ಯಕತೆಯಿದೆ. ಐದು ವರ್ಷಗಳಲ್ಲಿ 9,13,000 ಕೋ. ರೂ. ವೆಚ್ಚದಲ್ಲಿ ರೈಲ್ವೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಯೋಜನೆ ಸೇರಿದಂತೆ ಪ್ರತ್ಯೇಕ 'ರೈಲ್ವೆ ಆಧುನೀಕರಣ ನಿಧಿ'ಯನ್ನು ಸ್ಥಾಪಿಸಲು ಸಮಿತಿ ಸೂಚಿಸಿದೆ.

ಪ್ರಯಾಣ ದರ ಶೇ. 25 ಏರಿಕೆಯಾದರೆ ರೈಲ್ವೆಯ ಬೊಕ್ಕಸಕ್ಕೆ ವಾರ್ಷಿಕ 37,500 ಕೋಟಿ. ರು. ಹೆಚ್ಚುವರಿ ವರಮಾನ ಬರಲಿದೆ. ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸಲು 53,827 ಕೋಟಿ ರು.. ಮತ್ತು ಹೊಸ ಯೋಜನೆಗಳಿಗೆ 1 ಲಕ್ಷ ಕೋಟಿ ರು.ಅಗತ್ಯವಿದೆ.

English summary
Indian Railways has said it is proposing an increase in fares by 25% to meet the estimated annual income earning. Prime Minister Adviser Sam Pitroda has proposed several recommendation on modernization and upgrading of Indian Railways (IR)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X