ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗುತ್ತಿಗೆಗೆ ಕಡಿವಾಣ, ಶುರುವಾಯ್ತು ಒಬಾಮಾ ಅಭಿಯಾನ

By Mahesh
|
Google Oneindia Kannada News

Barack Obama
ವಾಷಿಂಗ್ಟನ್, ಜ.25: ಹೊರಗುತ್ತಿಗೆ ವಿರುದ್ಧ ಅಭಿಯಾನ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಭಾರತ ಸೇರಿದಂತೆ ಹಲವು ದೇಶಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಅಮೆರಿಕದ ನೇಮಕಾತಿ ಮಸೂದೆ ಬಗ್ಗೆ ಬುಧವಾರ ಮಾತನಾಡಿದ ಒಬಾಮಾ,ಸ್ಥಳೀಯ ಅಭ್ಯರ್ಥಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಭಾರತದ ಹೊರಗುತ್ತಿಗೆ ಸಂಸ್ಥೆ ಇದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ.

ಹೊರಗುತ್ತಿಗೆ ನಡೆಸುತ್ತಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ. ಹೊರಗುತ್ತಿಗೆ, ಸಾಲಬಾಧೆ, ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಬೇಕೆಂದು ಅನೇಕ ಹೊಸ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಒಬಾಮಾ ಹೇಳಿದರು.

ಅಮೆರಿಕದ ಈ ಹೊಸ ನೀತಿಯಿಂದ ಚೀನಾ ಕಂಪನಿಗಳಿಗೆ ಪರೋಕ್ಷವಾಗಿ ಲಾಭವಾಗುವ ನಿರೀಕ್ಷೆಯಿದೆ. ಭಾರತದ ಹೊರ ಗುತ್ತಿಗೆ ಸಂಸ್ಥೆಗಳು ತೆರಿಗೆ ಹೊರೆ ಹೊರಬೇಕಾಗುತ್ತದೆ. ಇಲ್ಲದಿದ್ದರೆ ಅಮೆರಿಕದೊಡನೆ ವ್ಯಾಪಾರ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ.

English summary
Stepping up his campaign against outsourcing, US President Barack Obama on Wednesday announced a series of measures that would offer incentives to those firms which will create jobs in the country, a move that may also affect companies in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X