ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರು.4ಕ್ಕೆ ನಂದಿನಿ ಹಾಲು ಮನೆಗೆ ಕೊಂಡೊಯ್ಯಿರಿ

By Mahesh
|
Google Oneindia Kannada News

Nandini Milk
ಬೆಂಗಳೂರು, ಜ.24: ಕರ್ನಾಟಕ ಹಾಲು ಉತ್ಪಾದಕರ ಮಹಾ ಒಕ್ಕೂಟ ಲಿ(KMF) ಹೊಸ ಹೊಸ ಮಾದರಿಯಲ್ಲಿ ಹಾಲು ಮಾರಾಟಕ್ಕಿಳಿದೆ. ದೇಶದ ಎರಡನೇ ಅತಿದೊಡ್ಡ ಹಾಲು ಒಕ್ಕೂಟ ವ್ಯವಸ್ಥೆ ಹೊಂದಿರುವ ಕೆಎಂಎಫ್, ಈಗ 100ಮಿ.ಲೀ ಹಾಲನ್ನು ರು.4ರ ದರದಲ್ಲಿ ಮಾರಲು ನಿರ್ಧರಿಸಿದೆ.

ಬಹುಬೇಡಿಕೆಯ ನಂದಿನಿ ಗುಡ್ ಲೈಫ್ ಹಾಲನ್ನು ಟೆಟ್ರಾಪ್ಯಾಕ್ ನಲ್ಲಿ ತುಂಬಿ ಮಾರಾಟ ಮಾಡುವ ಯೋಜನೆಯನ್ನು ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರ ರೆಡ್ಡಿ ಪ್ರಕಟಿಸಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ನಂದಿನಿ ಗುಡ್ ಲೈಫ್ ಗೆ ಭಾರಿ ಬೇಡಿಕೆ ಇದೆ. ಈ ಯೋಜನೆ ಮೂಲಕ ನಾವು ದಕ್ಷಿಣ ಭಾರತದ ಮೂಲೆ ಮೂಲೆಗೂ ನಂದಿನಿ ಹಾಲು ಸರಬರಾಜು ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಟೆಟ್ರಾ ಪ್ಯಾಕ್ ಮೂಲಕ ನೀಡಲಾಗುತ್ತಿರುವ ನಂದಿನಿ ಹಾಲಿನ ದರ ಅತಿ ಕಡಿಮೆಯಾಗಿದೆ ಹಾಗೂ ಇದು ಹೆಚ್ಚು ಕಾಲ ಇಡಬಹುದಾಗಿದ್ದು, ಹೆಚ್ಚು ಜನರನ್ನು ತಲುಪಲು ಸಹಕಾರಿಯಾಗಿದೆ ಎಂದು ಟೆಟ್ರಾ ಪ್ಯಾಕ್ ದಕ್ಷಿಣ ಏಷ್ಯಾದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕಂದರ್ಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

English summary
Karnataka Cooperative Milk Producers’ Federation Limited (KMF)has introduced Nandini GoodLife toned milk in new tetra pack available at Rs 4/ 100ml. KMF is planning to reach most remote areas of the southern states said KMF Chairman G Somasekhara Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X