ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿಬಜಾರ್ ಪೊಲೀಸರು ನಿದ್ರಿಸುತ್ತಿದ್ದಾರೆ donot disturb!

By Srinath
|
Google Oneindia Kannada News

gandhi-bazaar-markets-razed-south-police-on-rest
ಬೆಂಗಳೂರು, ಜ.24: ಪೊಲೀಸರು ನಿದ್ರಿಸುತ್ತಿದ್ದಾರೆ donot disturb. ಇದು ಒಳ್ಳೆಯದಕ್ಕೇ! ಪಾಪ ನಮ್ಮ ಪೊಲೀಸರಿಗೆ ಅಷ್ಟೂ ರೆಸ್ಟ್ ಕೊಡದಿದ್ದರೆ ಹೇಗೆ. ಅಷ್ಟಕ್ಕೂ ನಮ್ಮ ಘನಂಧಾರಿ ಪೊಲೀಸರು ಅಂಥಾದ್ದು ಏನು ಮಾಡಿದರಪ್ಪಾ ಅಂದ್ರೆ...

ಒಂದು ಕಡೆಯಿಂದ ಬಿಬಿಎಂಪಿ ಅಧಿಕಾರಿಗಳು ಗಾಂಧಿಬಜಾರಿನಲ್ಲಿ ಪುರಾತನ ಮಾರುಕಟ್ಟೆಗಳನ್ನು ಧ್ವಂಸ ಮಾಡುತ್ತಾ ಬಂದರೆ ಈ ಪೊಲೀಸರು ಕಣ್ಣಿಗೆ ಎಣ್ಣೆಬಿಟ್ಟು ಕೊಂಡು ಆ ಅಧಿಕಾರಿಗಳಿಗೆ ರಕ್ಷಣೆ ಒದಗಿಸಿದ್ದಾರೆ. ಅದು ಜಯನಗರ ಇನ್ಸ್‌ಪೆಕ್ಟರ್ ಉಮೇಶ್ ಇರಬಹುದು ಅಥವಾ ಖುದ್ದು ಸೋನಿಯಾ ಮೇಡಂ ಇರಬಹುದು, ಬೆಂಗಳೂರಿನ ಇಡೀ ದಕ್ಷಿಣ ಭಾಗದ ಪೊಲೀಸರು ಮಂಗಳವಾರ ಗಾಂಧಿಬಜಾರಿನಲ್ಲಿ ಜಮಾಯಿಸಿದ್ದಾರೆ.

ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)
ಮಾರುಕಟ್ಟೆ ಅಂಗಡಿಯವರು ಏಲ್ಲಿ ರಂಪ, ರಾದ್ದಾಂತ ಮಾಡ್ತಾರೋ ಅಂತ ಪೇದೆಯಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಅಷ್ಟೂ ಠಾಣೆಗಳ ಇನ್ಸ್‌ಪೆಕ್ಟರುಗಳ ಸುಪರ್ದಿಯಲ್ಲಿ ಉಸ್ತುವಾರಿ ವಹಿಸಿದ್ದಾರೆ. ಬೆಳಗಿನ ಜಾವ ಕೆಲವರು ಮನೆಗಳಿಗೆ ಹೋದವರೇ 'donot disturb' ಬೋರ್ಡು ಹಾಕದೇ ಹಾಗೇ ನಿದ್ದೆಗೆ ಜಾರಿದ್ದಾರೆ.

ಗುಂಪು ಗುಂಪಾಗಿ ಬಂದು ಬೆಳಗ್ಗೆ ಗಾಂಧಿಬಜಾರನ್ನು ನೋಡಿದ ಜನ well done, take rest ಅಂತ ಪೊಲೀಸರಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಮತ್ತೊಂದು ಶಿಫ್ಟಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈಗಲೂ ಪೊಲೀಸರು ಗಾಂಧಿಬಜಾರನ್ನು ಕಾಯುತ್ತಿದ್ದಾರೆ. ಅತ್ತ ಅಂಗಡಿಗಳನ್ನು ಕಳೆದುಕೊಂಡವರು ತಿರುಗಿ ಬೀಳಲು ಹೊಂಚುಹಾಕುತ್ತಿದ್ದಾರೆ.

English summary
BBMP has demolished all the flower markets, fruit stalls and vegetable stalls in Gandhi Bazaar, Bangalore on Jan 23 midnight. The police force from Bangalore South stood in protection of BBMP officials through out the night. As such now, they are on rest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X