ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಷ್ಟೆಲ್ಲ ಅನರ್ಥಕ್ಕೆ ಯಡಿಯೂರಪ್ಪನೇ ಕಾರಣ...

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಜ.24: ಅನಿಷ್ಟಕ್ಕೆಲ್ಲ ಶನೀಶ್ಚರನೇ ಕಾರಣ ಎಂಬಂತೆ ಗಾಂಧಿಬಜಾರಿನ ಲೇಟಸ್ಟ್ ಧ್ವಂಸ ಪ್ರಕರಣಕ್ಕೂ ನಮ್ಮ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಲಿಂಕ್ ಇದೆ.

ವಿದ್ಯಾರ್ಥಿ ಭವನ್ ಹಾಲ್ ಆಫ್ ಫೇಮ್ಗೆ ಯಡ್ಡಿ ಸೇರಿದ ಮೇಲೆ... ಹಾಗೆ ಹೂ, ಹಣ್ಣು ತರಕಾರಿ ಮಾರಾಟಗಾರ ಜೊತೆ ಎರಡು ನಿಮಿಷ ಮಾತನಾಡಿದ ಅಂದಿನ ಸಿಎಂ ಎಲ್ಲರಿಗೂ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದರು.

"ಅಣ್ಣಂದಿರೇ, ಅಕ್ಕ ತಂಗಿಯರೇ ನಿಮ್ಮ ನೋವು ನನಗೆ ಅರ್ಥ ಆಗುತ್ತದೆ. ನಿಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಇಲ್ಲಿಂದ ನಿಮ್ಮ ಅಂಗಡಿಗಳನ್ನು ತೆರವುಗೊಳಿಸುವುದಿಲ್ಲ" ಎಂದು ಯಡಿಯೂರಪ್ಪ ಅವರು ನೀಡಿದ್ದ ಭರವಸೆ ಹುಸಿಯಾಗಿದೆ.

ಅನಾಥ ರಕ್ಷಕ ಯಡ್ಡಿ: ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ನಮ್ಮ ಬದುಕನ್ನು ಕಿತ್ತುಕೊಳ್ಳಲು ಬಂದಿದ್ದಾರೆ ನಮ್ಮನ್ನು ಕಾಪಾಡಿ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ಅವರ ಕಾಲಿಗೆರಗಿದ್ದರು. ಇದನ್ನು ಕಂಡು ವಿದ್ಯಾರ್ಥಿ ಭವನ್ ದೋಸೆ ಮೇಲಿನ ಬೆಣ್ಣೆಯಂತೆ ಕರಗಿದ ಶ್ರೀಮಾನ್ ಯಡಿಯೂರಪ್ಪ ಅವರು ಆಶ್ವಾಸನೆ ನೀಡಿದ್ದರು.

ಆದರೆ, ಆಶ್ವಾಸನೆ, ಆದೇಶವಾಗಲಿಲ್ಲ. ಯಡಿಯೂರಪ್ಪ ಸರ್ಕಾರ ಉಳಿಯಲಿಲ್ಲ. ಸುಪ್ರೀಂಕೋರ್ಟ್ ಆದೇಶ, ಸರ್ಕಾರದ ನಿರ್ದೇಶನದ ಮೇರೆಗೆ ಬಿಬಿಎಂಪಿ ತನ್ನ ಕಾರ್ಯ ತಾನು ಮುಂದುವರೆಸಿದೆ.

ಯಡಿಯೂರಪ್ಪ ಅವರ ಭರವಸೆ ನೆಚ್ಚಿಕೊಂಡ ಇಲ್ಲಿನ ವ್ಯಾಪಾರಸ್ಥ ಮತ್ತೆ ಸರ್ಕಾರದ ಕದ ತಟ್ಟಲೇ ಇಲ್ಲ. ಬಿಬಿಎಂಪಿ ನೋಟಿಸ್ ಗೆ ಬೆದರದೆ, ನಿತ್ಯ ಖಾಕಿ ಪಡೆಗೆ ಮಾಮೂಲಿ ನೀಡುತ್ತಾ ಕಾಲದೂಡುತ್ತಿದ್ದದ್ದು ಈಗ ಬುಡಕ್ಕೆ ಬಂದಿದೆ.

ಯಡಿಯೂರಪ್ಪ ಅವರಂತೆ ಸ್ಥಳೀಯ ಕಾರ್ಪೋರೇಟರ್, ಮಾಜಿ ಸದಸ್ಯರುಗಳಾದ ಚಂದ್ರಶೇಖರ್, ರವಿ ಸುಬ್ರಮಣ್ಯ ಆ ಕಡೆಯಿಂದ ಕಟ್ಟೆ ಸತ್ಯನಾರಾಯಣ ಅವರುಗಳು ಕೂಡಾ ಶಾಶ್ವತ ಪರಿಹಾರ ಒದಗಿಸುವ ಯಾವ ಮಾತನ್ನು ಆಡದಿರುವುದು ವ್ಯಾಪಾರಸ್ಥರ ಕುತ್ತಿಗೆ ಬಂದಿದೆ ಅಷ್ಟೇ.

ರಾಜಕಾರಣಿಗಳ ಭರವಸೆಗಳು ನೀರ ಮೇಲಿನ ಗುಳ್ಳೆಯಂತೆ ಎಂಬ ನಿಜ ಎಲ್ಲರಿಗೂ ಗೊತ್ತಿದೆ.

English summary
Bengaluru Maha Nagara Palike(BBMP) is unnecessary made victim in Gandhi Bazaar Demolition drive. BBMP has issued notice to all the fruit and flower vendors about the demolition from past two years says BBMP officials. Former CM BS Yeddyurappa's false assurance made vendors to continue business in Gandhi Bazaar without permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X