ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿಬಜಾರು ಅಂಗಡಿ ಧ್ವಂಸ, ಬಿಬಿಎಂಪಿ ಬೈಬೇಡಿ

By Mahesh
|
Google Oneindia Kannada News

ಬೆಂಗಳೂರು, ಜ.24: ಈ ಕ್ಷಣಕ್ಕೆ ನೋಡಿದರೆ, ಗಾಂಧಿಬಜಾರಿನ ಹಣ್ಣು ಹೂವಿನ ಬೀದಿಯಲ್ಲಿ ಆಗಿರುವ ಅನಾಹುತಕ್ಕೆ ಬಿಬಿಎಂಪಿಯನ್ನು ನೇರ ಹೊಣೆ ಮಾಡಲಾಗುತ್ತಿದೆ. ಆದರೆ, ಇದು ಶಾಶ್ವತ ತೆರವು ಕಾರ್ಯಾಚರಣೆಯೋ ಅಥವಾ ತಾತ್ಕಾಲಿಕ ಪರಿಹಾರವೋ ಎಂಬ ಸಮಸ್ಯೆಗೆ ಉತ್ತರ ಇಲ್ಲಿದೆ. ಅಂಗಡಿ ಧ್ವಂಸದಿಂದ ಕೆಲವರಿಗೆ ಖುಷಿಯಾಗಿದೆ. ಹಲವರಿಗೆ ಸಂಕಟವಾಗಿದೆ.

ಗಾಂಧಿಬಜಾರು ಫುಟ್ ಪಾತ್ ತೆರವು ಕಾರ್ಯ ಕಳೆದ ಎರಡ ವರ್ಷದಿಂದ ನಡೆದಿದೆ. ಜುಲೈ 10, 2010ರ ವೇಳೆಗೆ ಅಂಗಡಿಗಳ ತೆರವು ಕಾರ್ಯಕ್ಕೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿತ್ತು.

ಕಳೆದ 30-40 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿರುವ ಹೂವು, ಹಣ್ಣು, ತರಕಾರಿ ವ್ಯಾಪಾರಿಗಳ ತೀವ್ರ ಪ್ರತಿಭಟನೆಗೆ ಹೆದರಿ ಪಾಲಿಕೆ ಅಧಿಕಾರಿಗಳು ಲಾರಿ ತಿರುಗಿಸಿಕೊಂಡು ಹೋಗಿದ್ದರು. ಆದರೆ, ಸುಮಾರು 25ಕ್ಕೂ ವಾರ್ಡ್ ಗಳಲ್ಲಿ ಅಂಗಡಿ ತೆರವು ಕಾರ್ಯ ನಿರಾಂತಕವಾಗಿ ನಡೆದಿತ್ತು.

ಶೇಷಾದ್ರಿಪುರ 1ನೇ ಮುಖ್ಯರಸ್ತೆ, ಜಕ್ಕೂರು, ರಾಜಾಜಿನಗರ 19ನೇ ಮುಖ್ಯರಸ್ತೆ,ಯಲಹಂಕ, ದೊಡ್ಡ ಬೊಮ್ಮಸಂದ್ರ ಸೇರಿದಂತೆ ನಗರದ ವಿವಿಧೆಡೆ ಅಂಗಡಿ ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಮೈಸೂರು, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮ ಕಟ್ಟಡ, ಅಂಗಡಿ, ದೇಗುಲಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ಕೊಟ್ಟಿರುವುದು ಬಿಬಿಎಂಪಿಗೆ ಭೀಮಬಲ ಬಂದ್ದಂತ್ತಾಗಿದೆ, ಎರಡು ವರ್ಷಗಳಿಂದ ಬಿಬಿಎಂಪಿ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿ ಬೇರೆಡೆ ಹೋಗುವಂತೆ ವ್ಯಾಪಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ.

ಆದರೆ, ವ್ಯಾಪಾರ ದೃಷ್ಟಿಯಿಂದ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ಗಾಂಧಿಬಜಾರನ್ನು ಅಪ್ಪಿಕೊಂಡಿರುವ ವ್ಯಾಪಾರಿಗಳ ಕಿವಿಗೆ ಬಿಬಿಎಂಪಿ ಕೂಗು ಕೇಳಿಸಿರಲಿಲ್ಲ. ಇದರ ಪರಿಣಾಮ ಈ ಧ್ವಂಸ ಕಾರ್ಯ.

ಇಷ್ಟೆಲ್ಲ ಅನರ್ಥಕ್ಕೆ ಯಡಿಯೂರಪ್ಪನೇ ಕಾರಣ...

English summary
Bengaluru Maha Nagara Palike(BBMP) is unnecessary made victim in Gandhi Bazaar Demolition drive. BBMP has issued notice to all the fruit and flower vendors about the demolition from past two years says BBMP officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X