ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ಸಿಗೆ ಮಧು ಸೇರ್ಪಡೆ, ಗೌಡ್ರ ತಂತ್ರಗಾರಿಕೆ

By Mahesh
|
Google Oneindia Kannada News

S Bangarappa
ಬೆಂಗಳೂರು, ಜ.23: ಜೆಡಿಎಸ್‌ ಯುವ ಘಟಕಕ್ಕೆ ಮಧು ಬಂಗಾರಪ್ಪ ಆಯ್ಕೆ ಅನಿರೀಕ್ಷಿತವಾಗಿದ್ದರೂ, ದೇವೇಗೌಡರ ರಾಜಕೀಯ ತಂತ್ರಗಾರಿಕೆ ಕಂಡವರಿಗೆ ಇದು ನಿರೀಕ್ಷಿತವಾಗಿತ್ತು.

ಹಳಿಯಾಳದಲ್ಲಿ ಜನವರಿ 28 ರಂದು ನಡೆಯಲಿರುವ ಸಮಾವೇಶದಲ್ಲಿ ಮಧು ಬಂಗಾರಪ್ಪ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ ಮೇಲೆ ಪರ ವಿರೋಧ ಹೇಳಿಕೆಗಳು ಬಂದು ಈಗ ತಣ್ಣಗಾಗಿದೆ.

ಗೌಡರ ತಂತ್ರವಾದರೂ ಏನು?: ಬಿಜೆಪಿ ಪ್ರಾಬಲ್ಯವಿರುವ ಮಲೆನಾಡು-ಕರವಾಳಿ ಜಿಲ್ಲೆಗಳಲ್ಲಿ ಜೆಡಿಎಸ್ ಅಧಿಪತ್ಯ ಸ್ಥಾಪಿಸಲು ಕಸರತ್ತು ಆರಂಭವಾಗಿದೆ. ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರ ಅವರ ಜನಪ್ರಿಯತೆಯ ಲಾಭ ಪಡೆದು ಬಿಜೆಪಿಯನ್ನು ಮಣ್ಣು ಮುಕ್ಕಿಸಲು ಜೆಡಿಎಸ್ ಯೋಜಿಸಿದೆ.

ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು ಭಾಗದಲ್ಲಿ ಹಳೆತಲೆಗಳಿಗೆ, ಯುವ ನಾಯಕರಿಗೆ ಈಗಲೂ ಬಂಗಾರಪ್ಪ ಅವರೇ ಆದರ್ಶಪ್ರಾಯ ಎಂಬುದರಲ್ಲಿ ಎರಡು ಮಾತಿಲ್ಲ.

ಮಲೆನಾಡು-ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿಗೆ ಇರುವ ಈಡಿಗ ಸಮುದಾಯ, ಅಲ್ಪಸಂಖ್ಯಾತರ ಬೆಂಬಲ ಸಿಕ್ಕರೆ ಜೆಡಿಎಸ್ ವೋಟ್ ಬ್ಯಾಂಕ್‌ ಲೆಕ್ಕಾಚಾರ ಸರಿಯಾಗುತ್ತದೆ. ದೇವೇಗೌಡರ ಈ ನಡೆ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ಸಿಗೂ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.

ಬಂಗಾರಪ್ಪ ನಿಧನದ ಅನುಕಂಪದ ಅಲೆಯನ್ನು ಮತಗಳಾಗಿ ಪರಿವರ್ತನೆಗೊಂಡರೆ, ಜೆಡಿಎಸ್ ಯೋಜನೆ ಫಲಿಸಿದ್ದಂತಾಗುತ್ತದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಭದ್ರವಾಗಿರುವ ಜೆಡಿಎಸ್, ಬಳ್ಳಾರಿಯಲ್ಲಿ ಹೊಂದಾಣಿಕೆ ರಾಜಕೀಯದಲ್ಲಿ ಯಶ ಕಂಡಿದೆ. ಈಗ ಮಲೆನಾಡು- ಕರಾವಳಿ ಪ್ರದೇಶಗಳತ್ತ ಹರಿಸಿದೆ. ಏನಾಗುವುದೋ ಕಾದು ನೋಡೋಣ...

English summary
Why JDS opted for Madhu Bangarappa instead of Rajesh Gundurao? Rajesh was earlier promised for the post of youth wing president. Deve Gowda is planning to gain the Popularity of S Bangarappa and to get hold of Malnad region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X