ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂದಗಿ ಪಾಕ್ ಧ್ವಜ:ರಾಮಸೇನೆಗೆ ನಿಷೇಧದ ತೂಗುಕತ್ತಿ

By Srinath
|
Google Oneindia Kannada News

sri-rama-sene-to-be-banned-r-ashok
ಬೆಂಗಳೂರು, ಜ 23: ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿದ ದುಷ್ಕರ್ಮಿಗಳು ಶ್ರೀರಾಮಸೇನೆ ಸಂಘಟನೆಯ ವಿದ್ಯಾರ್ಥಿಗಳು ಎಂಬುದು ಪೊಲೀಸರಿಗೆ ಮನದಟ್ಟಾಗಿದೆ. ಆದ್ದರಿಂದ ಆ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಸರಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಗೃಹ ಸಚಿವ ಆರ್ ಅಶೋಕ್ ಅವರು ಸೋಮವಾರ ಹೇಳಿದ್ದಾರೆ.

ಶ್ರೀರಾಮಸೇನೆ ಸಂಘಟನೆ ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಆದರೆ ಈ ಬಾರಿ ಸಂಘಟನೆಯನ್ನು ನಿಷೇಧಕ್ಕೊಳಪಡಿಸುವುದು ಖಚಿತ ಎಂದು ಅಶೋಕ್ ಘಂಟಾಘೋಶವಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು. ಆದರೆ ನಿಷೇಧದ ಅವಧಿ, ಅದರ ಸ್ವರೂಪಗಳ ಬಗ್ಗೆ ಅಶೋಕ್ ಹೆಚ್ಚಿನ ಮಾಹಿತಿ ನೀಡಲಿಲ್ಲ.

ಗಮನಾರ್ಹವೆಂದರೆ ಹುಣಸೂರು ವಿರ್ದಾರ್ಥಿಗಳ ಅಪಹರಣ ಮತ್ತು ಹತ್ಯೆಯಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದ KFD ಮತ್ತು PDI ಸಂಘಟನೆಯನ್ನು ನಿಷೇಧಿಸುವ ಬಗ್ಗೆಯೂ ಆರು ತಿಂಗಳ ಹಿಂದೆ ಅಶೋಕ್ ಇದೇ ಮಾತುಗಳನ್ನು ಹೇಳಿದ್ದರು.

English summary
Six college students, owing allegiance to right wing group Sri Rama Sene, were arrested recently for allegedly hoisting Pakistan's flag in Sindhagi. As such Home Minister R Ashok has said today (Jan 23) that govt is planning to ban Sri Rama Sene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X