ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಗೌರೀಶ್ ಕಾಯ್ಕಿಣಿ ಜನ್ಮ ಶತಮಾನೋತ್ಸವ

By Prasad
|
Google Oneindia Kannada News

Kannada scholar Gourish Kaikini (1912-2002)
ನವದೆಹಲಿ, ಜ. 21 : ಜೀವನದ ಅರವತ್ತಕ್ಕೂ ಹೆಚ್ಚು ವಸಂತಗಳನ್ನು ಕರ್ನಾಟಕದ ಹೊರಗೆ ಮುಂಬೈನಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿದ ಹೆಮ್ಮೆಯ ವೈಚಾರಿಕ ಬರಹಗಾರ ಗೌರೀಶ್ ಕಾಯ್ಕಿಣಿ (1912-2002) ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಜ.21 ಮತ್ತು 22ರಂದು ನವದೆಹಲಿಯಲ್ಲಿ ನಡೆಸಲಾಗುತ್ತಿದೆ.

ಜ.21ರ ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸದಸ್ಯರಾದ ಕೆ. ಮರುಳಸಿದ್ದಪ್ಪ ಅವರು ಉದ್ಘಾಟಿಸಲಿದ್ದಾರೆ. ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಂಡ ಲೇಖಕ ಡಾ. ಚಂದ್ರಶೇಖರ ಕಂಬಾರ ಮತ್ತು ವಿಮರ್ಶಕ ಸಿಎನ್ ರಾಮಚಂದ್ರ ಅವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಕೇಂದ್ರ ಕಾರ್ಪೊರೇಟ್ ಸಚಿವರಾಗಿರುವ ಡಾ. ವೀರಪ್ಪ ಮೊಯ್ಲಿ ಅವರು ಅಧ್ಯಕ್ಷತೆ ವಹಿಸುತ್ತಿದ್ದು, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವೆಂಕಟಾಚಲ ಹೆಗಡೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಉದ್ಘಾಟನೆಯ ನಂತರ ಗೌರೀಶ್ ಕಾಯ್ಕಿಣಿ ಅವರು ರಚಿಸಿದ ನಾಟಕ 'ಅತ್ತೆಗೆ ಲತ್ತೆ'ವನ್ನು ಸಂಜೆ 6 ಗಂಟೆಗೆ ದೆಹಲಿ ಕರ್ನಾಟಕ ಸಂಘದವರು ಪ್ರಸ್ತುತಪಡಿಸುತ್ತಿದ್ದಾರೆ.

ಮರುದಿನ ಜ.22ರಂದು ಬೆಳಿಗ್ಗೆ 10.30ರಿಂದ ಗೌರೀಶ್ ಕಾಯ್ಕಿಣಿಯವರ ವೈಚಾರಿಕ ಬರಹಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಗೌರೀಶ್ ಅವರ ಮಗ ಸಾಹಿತಿ ಜಯಂತ್ ಕಾಯ್ಕಿಣಿ ಅವರು ತಮ್ಮ ತಂದೆಯ ವ್ಯಕ್ತಿತ್ವದ ಬಗ್ಗೆ ಅನಿಸಿಕೆ, ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಕು.ಸೃಜನ ಕಾಯ್ಕಿಣಿ ಅವರಿಂದ ಓಡಿಸ್ಸಿ ನೃತ್ಯ ಮತ್ತು 5 ಗಂಟೆಗೆ ಹೊಸಕೋಟೆಯ ಜನಪದರು ರಂಗತಂಡದಿಂದ ಕಂಬಾರರ 'ಸಾಂಬಶಿವ ಪ್ರಹಸನ' ನಾಟಕ ಆಡಲಿದ್ದಾರೆ.

ಸಮಾರಂಭ ನಡೆಯುವ ಸ್ಥಳ : ದೆಹಲಿ ಕರ್ನಾಟಕ ಸಂಘ, ಸೆಕ್ಟರ್-12, ಆರ್.ಕೆ.ಪುರಂ, ನವದೆಹಲಿ - 110 022.

English summary
Kannada scholar Late Gourish Kaikini (1912-2002) birth centenary celebrations will be held in New Delhi on January 21 and 22. Jnanpith awardee Dr. Chandrasekhar kambar will grace the function. Jayanth Kaikini will be speaking about his father's personality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X