ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಂಡಹಳ್ಳಿ ರಸ್ತೆ ಸುರಂಗ ಎಂಬ ನಿತ್ಯ ನರಕ

By Prasad
|
Google Oneindia Kannada News

Nayandahalli underpass : Traffic police file case against BDA
ಬೆಂಗಳೂರು, ಜ. 21 : ಮೈಸೂರು ರಸ್ತೆ ನಾಯಂಡಹಳ್ಳಿ ಅಂಡರ್ ಪಾಸ್‌ನಲ್ಲಿ ಸರಿಯಾದ ದೀಪದ ವ್ಯವಸ್ಥೆ ಕಲ್ಪಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ವಿರುದ್ಧ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಜ.20ರ ಶುಕ್ರವಾರ ಅಂಡರ್ ಪಾಸ್‌ನಲ್ಲಿ ಬೆಳಕಿನ ಕೊರತೆಯಿಂದಾಗಿ ಒಂದು ಅಪಘಾತ ಸಂಭವಿಸಿ ಓರ್ವ ಸಾವಿಗೀಡಾಗಿದ್ದ. ಸಿಮೆಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಒಂದು ಸಾವಿನ ಜೊತೆ 12 ವಾಹನಗಳು ಜಖಂ ಆಗಿದ್ದವು. ತಪ್ಪಿಸಿಕೊಂಡಿರುವ ಲಾರಿ ಚಾಲಕನ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.

ನಾಗರಬಾವಿಯಿಂದ ಬಂದು ನಾಯಂಡಹಳ್ಳಿ ಜಂಕ್ಷನ್ ಕೂಡುವಲ್ಲಿರುವ ಅಂಡರ್ ಪಾಸ್ ನಿರ್ಮಾಣವೇ ಕಳಪೆಯಾಗಿದೆ. ಅಲ್ಲಿ ನಾಲ್ಕು ದಾರಿಗಳಿದ್ದರೂ ಎರಡೂ ಯಾವಾಗಲೂ ರಿಪೇರಿಯಲ್ಲಿರುತ್ತವೆ. ಹೀಗಾಗಿ ವಾಹನದಟ್ಟಣೆ ಯಾವಾಗಲೂ ಇದ್ದದ್ದೆ. ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಸೂಕ್ತವಾಗಿಲ್ಲದೆ ಸುರಂಗದಲ್ಲಿ ಸಾಗಿದಂತೆ ವಾಹನ ಚಾಲಕರಿಗೆ ಭಾಸವಾಗುತ್ತದೆ.

ಪ್ರತಿದಿನ ಸೂರ್ಯ ಮುಳುಗಿದ ಮೇಲೆ ನಾಯಂಡಹಳ್ಳಿ ಜಂಕ್ಷನ್ ದಾಟುವುದು ಪ್ರತಿ ಸಂಚಾರಿಗೆ ಯಮಯಾತನೆಯ ಸಂಗತಿ. ಇನ್ನು ಪೊಲೀಸರ ಪಾಡಂತೂ ಕೇಳುವುದೇ ಬೇಡ. ಇಡೀ ದಿನ ವಾಹನ ಸಂಚಾರ ನಿಯಂತ್ರಿಸುವ ಹೊತ್ತಿಗೆ ಸಂಜೆಯಾಗುತ್ತಿದ್ದಂತೆ ಹೈರಾಣಾಗಿರುತ್ತಾರೆ.

ಸರಿಯಾದ ಬೆಳಕಿನ ವ್ಯವಸ್ಥೆ ನೀಡಬೇಕೆಂದು ಪೊಲೀಸರು ಸಾಕಷ್ಟು ದೂರು ನೀಡಿದ್ದರೂ ಬಿಡಿಎ ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ. ಇದರಿಂದಾಗಿ ನಾಯಂಡಹಳ್ಳಿ ಜಂಕ್ಷನ್ನಿನಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ನಮ್ಮ ಮೆಟ್ರೋ ನಿರ್ಮಾಣ ಕೂಡ ಈ ಸಂಕಷ್ಟಗಳಿಗೆ ನೀರು ಸುರಿದಿದೆ.

English summary
Byataranapura traffic police have filed a case against Bangalore Development Authority (BDA) for neglecting the Nayandahalli underpass on Mysore road. They allege BDA has not provided proper lighting facility at underpass, due to which accidents are happening frequently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X