ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರ್ಯ ಉತ್ಪತ್ತಿಸುವ ಕೃತಕ ವೃಷಣದ ಆವಿಷ್ಕಾರ?

By Prasad
|
Google Oneindia Kannada News

Artificial testicles to produce human sperm
ಸ್ಯಾನ್ ಫ್ರಾನ್ಸಿಸ್ಕೋ, ಜ. 20 : ಮಕ್ಕಳಾಗಲಿಲ್ಲವೆಂದು ಕೊರಗುವ 'ಪುರುಷ' ಮಹಾಶಯರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ. ಮಾನವ ವೀರ್ಯವನ್ನು ಉತ್ಪತ್ತಿ ಮಾಡುವ ತಾಕತ್ತಿರುವ ಕೃತಕ ವೃಷಣಗಳನ್ನು ಅಮೆರಿಕಾದ ವಿಜ್ಞಾನಿಗಳು ಸೃಷ್ಟಿಸುವ ಹಂತದಲ್ಲಿದ್ದಾರೆ.

ಇದು ಸಾಧ್ಯವಾದರೆ, ವೀರ್ಯದ ಕೊರತೆಯಿದೆ ಎಂಬ ಕಾರಣಕ್ಕೆ ಮಕ್ಕಳಾಗಲಿಲ್ಲ ಎಂದು ಕೊರಗುವ ದಂಪತಿಗಳು ಐಐಟಿ ವಿದ್ಯಾರ್ಥಿಯ ವೀರ್ಯವೇ ಬೇಕೆಂದು ಅಂಗಲಾಚುವ ಅಗತ್ಯವಿಲ್ಲ. ಮತ್ತು ಹೆಂಡತಿ ಹಿಯಾಳಿಸುತ್ತಾಳೆಂದು ಖಿನ್ನತೆಗೆ ಜಾರುವ ಪ್ರಮೇಯವೂ 'ಪುರುಷ'ರಿಗೆ ಬರುವುದಿಲ್ಲ.

ಇಲಿಯ ಕೋಶಗಳನ್ನು ಬಳಸಿಕೊಂಡು ಗಂಡು ಇಲಿಯ ನಪುಂಸಕತೆಯನ್ನು ನಿವಾರಿಸಲು ಕೃತಕ ವೀರ್ಯವನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಆದರೆ, ಇದು ಮಾನವರಲ್ಲಿ ಸಾಧ್ಯವಾಗಿರಲಿಲ್ಲ ಎಂದು ಸ್ಯಾನ್ ಫ್ರಾನ್ಸಿಸ್ಕೋದ ವಿಜ್ಞಾನಿ ಡಾ. ಪಾಲ್ ತುರೆಕ್ ಹೇಳಿದ್ದಾರೆ.

ವಿಜ್ಞಾನಿಗಳು ಕಂಡುಹಿಡಿಯಲಿರುವ ಈ ಸಾಧನ ಮಾನವದ ವೃಷಣವನ್ನೇ ಹೋಲುತ್ತವೆ. ಆದರೆ, ವೀರ್ಯ ಉತ್ಪತ್ತಿಸುವ ಈ ವೃಷಣಗಳ ಆಯಸ್ಸು ಕೇವಲ 70 ದಿನಗಳು ಮಾತ್ರ. ಅಷ್ಟರಲ್ಲಿ ಅವು ಕೆಲಸ ಮಾಡಲಿಲ್ಲವೆಂದರೆ, ಹೊಸ ವೃಷಣಗಳನ್ನು ಸೃಷ್ಟಿಸಬೇಕಾಗುತ್ತದೆ.

ಈ ಆವಿಷ್ಕಾರ ಯಶಸ್ವಿಯಾದರೆ ಕೋಟ್ಯಾನುಕೋಟಿ ಅಮ್ಮಂದಿರ ಮಡಿಲನ್ನು ಈ ಕೃತಕ ವೃಷಣಗಳು ತುಂಬಬಲ್ಲವು. ಆದರೆ, ಈಗಾಗಲೆ ಜನಸಂಖ್ಯೆಯಿಂದ ತುಂಬಿತುಳುಕುತ್ತಿರುವ ಭಾರತದಂತಹ ದೇಶಗಳಲ್ಲಿ ಇದು ಕಾರ್ಯ ನಿರ್ವಹಿಸಲು ಆರಂಭಿಸಿದರೆ ಯಾರು ಹೊಣೆ? ಆದರೆ ಇದು ಪ್ರಥಮ ಆವಿಷ್ಕಾರವೆ ಎಂಬುದು ಪ್ರಶ್ನೆ.

English summary
American scientists are on the threshold of creating artificial testicle, which produces human sperms. If this invention succeeds it may eradicate infertility all over the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X