ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಮಾಣಿಕ ಮೇಷ್ಟ್ರ ಬ್ಯಾಂಕ್ ಖಾತೆಯಲ್ಲಿ ಇದೇನಿದು?

By Prasad
|
Google Oneindia Kannada News

Parijat Saha
ಕೋಲ್ಕತಾ, ಜ. 20 : ಅವರಿವರ ದುಡ್ಡು ತಿನ್ನದೆ ಅತ್ಯಂತ ಪ್ರಾಮಾಣಿಕವಾಗಿ ದುಡಿಯುವ ಶಾಲಾ ಮಾಸ್ತರು 35ರ ವಯಸ್ಸಿನಲ್ಲಿ ಎಷ್ಟು ದುಡಿದಿರಬಹುದು? ಮನೆ ಖರ್ಚನೆಲ್ಲ ತೂಗಿಸಿದ ನಂತರ ಆತನ ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ಹಣ ಜಮಾವಣೆಯಾಗಿರಬಹುದು? ಒಂದೆರಡು ಲಕ್ಷ ಇದ್ದರೆ ಅಬ್ಬಬ್ಬಾ ಅನ್ನಬಹುದು.

ಒಂದೆರಡು ಲಕ್ಷ ಹೋಗಲಿ, ಬ್ಯಾಂಕ್ ಅಕೌಂಟಿನಲ್ಲಿ ಹತ್ತು ಸಾವಿರ ರು.ಗೆ ಹೆಚ್ಚು ಕಮ್ಮಿ ಇರಬಹುದಾ ಎಂದು ನೋಡಲು ಹೋದವನಿಗೆ ಖಾತೆಯಲ್ಲಿ 49,000 ಕೋಟಿ ರು. ಇರುವುದು ತಿಳಿದುಬಂದರೆ ಏನಾದೀತು? ಅದೃಷ್ಟ ಆತನ ಹೃದಯ ದುರ್ಬಲವಾಗಿರಲಿಲ್ಲ, ಮನಸ್ಸೂ ಮಲಿನವಾಗಿರಲಿಲ್ಲ, ದುರಾಸೆಯಂತೂ ಇರಲೇ ಇಲ್ಲ.

ಪಾರಿಜಾತ್ ಸಹಾ ಎಂಬ ಮೇಷ್ಟ್ರು ಮಾಡಿದ್ದೇನೆಂದರೆ, ನೇರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಫೋನಾಯಿಸಿ ಈ ವಿಷಯ ತಿಳಿಸಿದ್ದಾರೆ. ಎಸ್‌ಬಿಐ ಜೊತೆ ಸುರಕ್ಷಿತವಾಗಿ ಬ್ಯಾಂಕಿಂಗ್ ಮಾಡಿ ಎಂದು ಹೇಳುವ ಬ್ಯಾಂಕಿನ ಮ್ಯಾನೇಜರ್ ಇದು ಹೇಗಾಯಿತೆಂದು ಹೇಳಲು ಬಾಯಿ ಬಿಡುತ್ತಿಲ್ಲ. ಈ ಮೊತ್ತ ಕೇಂದ್ರ ಸರಕಾರದ ವಾರ್ಷಿಕ ಶೈಕ್ಷಣಿಕ ಬಜೆಟ್ಟಿಗೆ ಸಮ.

ಸಹಾ ಅವರು ನ್ಯಾಯವಾಗಿ ತಮ್ಮ ಖಾತೆಯಲ್ಲಿದ್ದ ಹಣವನ್ನು ಮಾತ್ರ ವಾಪಸ್ ತೆಗೆದುಕೊಂಡಿದ್ದಾರೆ. ಉಳಿದ ಕೋಟಿ ಕೋಟಿ ಹಣ ಇನ್ನೂ ಖಾತೆಯಲ್ಲೇ ಇದೆ. ಪ್ರಾಮಾಣಿಕತೆಯ ಪರಾಕಾಷ್ಠೆ ಅಂದ್ರೆ ಇದೇನಾ? ಕೋಟಿ ಕೋಟಿ ಕೊಳ್ಳೆ ಹೊಡೆಯುವವರ ನಡುವೆ ಸಹಾನಂಥವರು, ಆಟೋದಲ್ಲಿ ಸಿಕ್ಕ 5 ಲಕ್ಷ ರು. ಹಿಂದಿರುಗಿಸಿದ ಬೆಂಗಳೂರಿನ ಆಟೋ ಚಾಲಕನಂಥವರೂ ಇದ್ದಾರೆ. ಧನ್ಯೋಸ್ಮಿ.

English summary
A school teacher Parijat Saha in Kolkata was stunned when he came to know that his SBI bank account had Rs 49,000 cr. He earns Rs 35,000 per month and was expecting balance of Rs. 10,000. Sincerely he informed the bank about the goof up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X