ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಇನ್ಫೋಸಿಸ್ ಗೆ 130 ಎಕರೆ ಭೂಮಿ

By Mahesh
|
Google Oneindia Kannada News

Infosys Indore SEZ
ಇಂದೋರ್, ಜ.20: ಮಧ್ಯಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಗೆ ಸುಮಾರು 130 ಎಕರೆ ಭೂಮಿ ಸಿಗುತ್ತಿದೆ. ಇದರಲ್ಲಿ ಏನು ವಿಶೇಷ ಎನಿಸಬಹುದು. ಇನ್ಫಿ ಸಂಸ್ಥೆ ಕೇಳಿದ್ದು 100 ಎಕರೆ ಆದರೆ ಸಿಗುತ್ತಿರುವುದು 130 ಎಕರೆ.

ಸೂಪರ್ ಕಾರಿಡಾರ್ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆಗೆ 100 ಎಕರೆ ಬದಲಿಗೆ 130 ಎಕರೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ತಾಂತ್ರಿಕ ದೋಷದಿಂದಾಗಿ 100 ಎಕರೆ ಮಾತ್ರ ಎಂದು ಈ ಮುಂಚೆ ಪ್ರಕಟಿಸಲಾಗಿತ್ತು ಎಂದು ಮಧ್ಯಪ್ರದೇಶದ ಐಟಿ ಸಚಿವ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ಪ್ರತಿ ಎಕರೆಗೆ 20 ಲಕ್ಷ ರುನಂತೆ ಭೂಮಿಯನ್ನು ಹಂಚಲಾಗಿದೆ. ಇನ್ಫೋಸಿಸ್ ಹಾಗೂ ಟಿಸಿಎಸ್ ಸಂಸ್ಥೆ ತಲಾ 100 ಎಕರೆ ನೀಡಲು ನಿರ್ಧರಿಸಲಾಗಿತ್ತು. ಏಪ್ರಿಲ್ ನಲ್ಲಿ ಈ ಎರಡೂ ಸಂಸ್ಥೆಗಳು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಸಚಿವ ವಿಜಯ್ ಹೇಳಿದ್ದಾರೆ.

English summary
For setting up a special economic zone (SEZ), the Madhya Pradesh government on Thursday declared that it will provide 130 acre land instead of 100 acres to IT giant Infosys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X