ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ ಕೈ ತಪ್ಪಲಿದೆ?

By Mahesh
|
Google Oneindia Kannada News

DV Sadananda gowda
ಚಿಕ್ಕಮಗಳೂರು, ಜ.19: ಸಂಸದ ಸದಾನಂದ ಗೌಡ ರಾಜೀನಾಮೆನಿಂದ ತೆರವಾಗಿರುವ ಉಡುಪಿ-ಚಿಕ್ಕಮಗಳೂರು ಸಂಸದೀಯ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಈ ಬಾರಿಯೂ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆಯಿದೆ.

ಆದರೆ, ಯಡಿಯೂರಪ್ಪ ಅವರಂತೆ ರಾಜ್ಯ ಪ್ರವಾಸಕ್ಕೆ ಮುಂದಾಗಿರುವ ಜೆಡಿಎಸ್ ಕೂಡಾ ಅಚ್ಚರಿ ಫಲಿತಾಂಶ ನೀಡುವ ನಿರೀಕ್ಷೆ ಹೊಂದಿದೆ. ಆದರೆ, ಸಾರ್ವಜನಿಕರ ಪ್ರಕಾರ ಈ ಬಾರಿ ಸ್ವಲ್ಪ ಯಾಮಾರಿದರೂ ಸೋಲು ಖಚಿತ ಎನ್ನಲಾಗುತ್ತಿದೆ.

2009ರ ಲೋಕಸಭೆ ಚುನಾವಣೆಯಲ್ಲಿ ಡೀವಿ ಎದುರು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ 27,018 ಮತಗಳ ಅಂತರದಿಂದ ಸೋತಿದ್ದರು. ಆಗ ಬಿಜೆಪಿಯ ಡೀವಿಗೆ 4,01,441 ಮತ ಮತ್ತು ಹೆಗ್ಡೆಗೆ 3,74,423 ಮತಗಳು ಬಿದ್ದಿತ್ತು. ಆದ್ದರಿಂದ ಈಗಲೂ ಕ್ಷೇತ್ರದಲ್ಲಿ ಬಿಜೆಪಿಗೆ ಹೆಗ್ಡೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಕಾಂಗ್ರೆಸ್ ಕೂಡಾ ಹೆಗ್ಡೆಗೆ ಮತ್ತೆ ಅವಕಾಶ ನೀಡುವ ಸಾಧ್ಯತೆಯಿದೆ.

ಕೆಪಿಸಿಸಿ ಮೂಲಗಳ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಂಸದ ವಿನಯಕುಮಾರ ಸೊರಕೆ, ಕೇಂದ್ರ ಮಾಜಿ ಸಚಿವೆ ಡಿಕೆ ತಾರಾದೇವಿ ಸಿದ್ಧಾರ್ಥ ಮತ್ತು ಇನ್ನೊಬ್ಬ ಸಚಿವ ಬಿಎಲ್ ಶಂಕರ್ ಅವರ ಹೆಸರೂ ರೇಸಿನಲ್ಲಿದೆ.

ಸಿಟಿ ರವಿಗೆ ಬಹುತೇಕ ಟಿಕೆಟ್ ಸಿಗುವುದು ಕಷ್ಟವಾದ್ದರಿಂದ ಕಾರ್ಕಳದ ಸುನೀಲ್ ಕುಮಾರ್ ಗೆ ಅವಕಾಶ ಹೆಚ್ಚಿದೆ. ಎರಡೂ ಜಿಲ್ಲೆಗಳಿಗೆ ಬೇಕಾಗಿರುವ ಸುನೀಲ್ ಸಹಜವಾಗಿ ಜನಮನ್ನಣೆ ಗಳಿಸುವ ಸಾಧ್ಯತೆಯಿದೆ. ಅದು ಹೇಗೆ ಎಂದು ಮುಂದೆ ನೋಡುವ....

ಉಡುಪಿ ಚಿಕ್ಕಮಗಳೂರು ಕ್ಷೇತ್ರ ಕೂಡಾ ಸಮಸ್ಯೆಗಳ ಆಗರ....?

English summary
Karnataka BJP is busy in selecting right candidate for upcoming Udupi Chikmagalur lok sabha election. Here is preview on the constituency formerly represented by now Karnataka CM DV Sadananda Gowda. Congress is the main rival for BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X