ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲಹಂಕ ಸಮೀಪದ ಹಜ್ ಘರ್ ಏನು, ಏಕೆ?

By Srinath
|
Google Oneindia Kannada News

muslims-haj-ghar-yelahanka-bangalore-salient-features
ಬೆಂಗಳೂರು, ಜ.19: ಏನಿದು ಹಜ್ ಘರ್? ಕರ್ನಾಟಕದ ಮುಸ್ಲಿಂ ಸಮುದಾಯದವರ ಬಹುದಿನದ ಕನಸು. ಇದನ್ನು ನನಸಾಗಿಸುವ ನಿಟ್ಟಿನಲ್ಲಿ ನಗರದ ಯಲಹಂಕ ಹೋಬಳಿಯ ತಿರುಮೇನಹಳ್ಳಿಯಲ್ಲಿ ಸುಂದರ ಹಜ್ ಘರ್ ನಿರ್ಮಾಣಕ್ಕೆ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೊನ್ನೆ ಜನವರಿ 15ರಂದು ಚಾಲನೆ ಕೊಟ್ಟಿದೆ.

ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಿಗಳಿಗೆ ಆಧುನಿಕ ಸವಲತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಮಹತ್ತರ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 60 ಕೋಟಿ ರುಪಾಯಿ ಇದರ ಯೋಜನಾ ವೆಚ್ಚ.

ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹಜ್ ಘರ್ ಭವನದಲ್ಲಿ ವಿನ್ಯಾಸಗೊಳಿಸುವ ಯೋಜನೆಯಿದೆ. ಇಲಾಖೆಯ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಸಯ್ಯದ್ ಜಮೀರ್ ಪಾಷ ಮತ್ತು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಗೌಸ್ ಭಾಷ ಅವರು ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಹಜ್ ಘರ್ ವೈಶಿಷ್ಯ್ಟಗಳೇನು?:
ನಿವೇಶನದ ವಿಸ್ತೀರ್ಣ -13865 ಚ.ಮೀ.
ಕಟ್ಟಡದ ವಿಸ್ತೀರ್ಣ -24094 ಚ.ಮೀ, (ಎರಡು ನೆಲ ಮಾಳಿಗೆ, 4 ಮೇಲ್ಮಹಡಿಗಳು)
ವಸತಿ ವ್ಯವಸ್ಥೆ - 100 ಕೊಠಡಿಗಳು, ಪ್ರತಿಯೊಂದರಲ್ಲೂ ಐದು ಹಾಸಿಗೆ ಅವಕಾಶ
ಪ್ರಾರ್ಥನಾ ಸಭಾಗೃಹ -1,500 ಪುರುಷರು, 750 ಮಹಿಳೆಯರು
ಭೋಜನ ಕೊಠಡಿ -700 ಮಂದಿಗೆ
ಸಭಾಂಗಣ -900 ಆಸನಗಳು
ಪಾರ್ಕಿಂಗ್ ಸೌಲಭ್ಯ -300 ಕಾರು

English summary
The foundation laying ceremony of 'Haj Ghar' near Yelahanka took pleace on January 15. The new Haj Ghar, a long-standing demand of Muslims in the state, will be built at a total cost of Rs 40 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X