ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಕ್ಕಿಳಿದರೂ ಉಮಾ, ಮುಖ್ಯಮಂತ್ರಿ ಅಭ್ಯರ್ಥಿಯಲ್ಲ?

By Mahesh
|
Google Oneindia Kannada News

Uma Bharti
ನವದೆಹಲಿ, ಜ.19: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಮಾಭಾರತಿ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಆದರೆ, ಉಮಾ ಭಾರತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಒಪ್ಪಿಕೊಳ್ಳುತ್ತಿಲ್ಲ.

ಮಹೊಬಾ ಜಿಲ್ಲೆಯ ಚರ್ಕರಿ ವಿಧಾನಸಭಾ ಕ್ಷೇತ್ರದಿಂದ ಉಮಾ ಭಾರತಿ ಕಣಕ್ಕಿಳಿಯಲಿದ್ದಾರೆ. ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಉಮಾ ಅವರಿಗೆ ಯಾವ ಆಶ್ವಾಸನೆ ನೀಡಿ ಟಿಕೇಟ್ ನೀಡಿದೆ ಎಂಬುದು ಇನ್ನೂ ಕುತೂಹಲವಾಗಿ ಉಳಿದಿದೆ.

ರಾಜನಾಥ್ ಸಿಂಗ್, ಸೂರ್ಯ ಪ್ರತಾಪ್ ಸಾಹಿ ಹಾಗೂ ಕಲ್ ರಾಜ್ ಮಿಶ್ರಾ ಅವರು ಉಮಾ ಭಾರತಿ ಜೊತೆ ಮತಯಾಚಿಸಲಿದ್ದಾರೆ.

ಉತ್ತರ ಪ್ರದೇಶವನ್ನು 'ಉತ್ತಮ್ ಪ್ರದೇಶ' ಮಾಡುವುದಾಗಿ ಬಿಜೆಪಿ ಹೇಳಿಕೊಂಡಿದೆ. ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದೆ.

ಹಿಂದುಳಿದ ವರ್ಗಕ್ಕೆ ಶಿಕ್ಷಣ, ಉದ್ಯೋಗ ನೀಡುವ ಮಾಮೂಲಿ ಆಶ್ವಾಸನೆಗಳನ್ನು ಹೊತ್ತು ಉಮಾಜೀ ಮತಯಾಚಿಸಲಿದ್ದಾರೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ, ಉಮಾ ಅವರಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ಮಾತ್ರ ಬಿಜೆಪಿ ಚಕಾರ ಎತ್ತಿಲ್ಲ.(ಪಿಟಿಐ)

English summary
BJP has decided to field its firebrand leader Uma Bharti from the Charkari assembly seat in UP. To cash in on her popularity among the OBC vote bank. But BJP refused to say whether she will be projected as the Chief Ministerial candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X