ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವಾಟಿಕೆ ಆರೋಪಿಗಳಿಗೆ ಸಾವಿರ ರು. ದಂಡ ಸಾಕೆ?

By Prasad
|
Google Oneindia Kannada News

Prostitution in Gulbarga
ಗುಲಬರ್ಗಾ, ಜ. 19 : ಗುಲಬರ್ಗಾ ನಗರ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜನತಾ ಲಾಜಿಂಗ್‌ದಲ್ಲಿ ರತಿಕ್ರೀಡೆಯಲ್ಲಿ ತೊಡಗಿದ ಆರೋಪಿಗಳಿಗೆ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಬಿ. ದಿಲೀಪಕುಮಾರ ಅವರು ತಲಾ 1,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳಾದ ದಂಡೋತಿಯ ಚೆನ್ನಬಸಪ್ಪ ಹಾಗೂ ತೇಲ್ಕೂರಿನ ಲಕ್ಷ್ಮೀಬಾಯಿ 2007ರ ಡಿಸೆಂಬರ್ 5ರಂದು ಜನತಾ ಲಾಜ್ ಕೋಣೆ ಸಂಖ್ಯೆ 220ರಲ್ಲಿ ಬೆತ್ತಲಾಗಿ ರತಿಕ್ರೀಡೆಯಲ್ಲಿ ತೊಡಗಿದ್ದಾಗ ಸ್ಟೇಷನ್ ಬಜಾರ್ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಪಂಚರ ಸಮಕ್ಷಮದಲ್ಲಿ ಪೊಲೀಸ್ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿದ್ದರು.

ಆರೋಪಿ ಲಕ್ಷ್ಮಿಬಾಯಿ ವೇಶ್ಯಾವಾಟಿಕೆಗಾಗಿ ಬಂದು ಸಿಕ್ಕಿಬಿದ್ದಿದ್ದು ಮಾನವ ಸಾಗಾಣಿಕೆ ತಡೆ ಕಾಯ್ದೆಯ ಕಲಂ 7, 8(ಎ),(ಬಿ) ಅನ್ವಯ ಅಪರಾಧ ಮಾಡಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದಾಗಿ, ಈ ಆರೋಪಿಗಳ ವಿರುದ್ಧ ಪೊಲೀಸ್ ಇನ್ಸ್‌ಪೆಕ್ಟರ್ ಯು.ಬಿ. ಚಿಕ್ಕಮಠ ಅವರು ದೋಷಾರೋಪಣ ಪತ್ರ ಸಲ್ಲಿಸಿದ್ದರು.

English summary
The accused Dandoti Channabasappa and prostitute Lakshmi Bai have been found guilty of involving in prostitution and Rs. 1,000 fine imposed on both of them by JMFC court, Gulbarga. They were found in compromising position when police raided Janata lodge in Gulbarga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X