ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿವ್ ಇನ್ ಸಂಬಂಧ ಚಟ, ಆದರೆ ಅನೈತಿಕ: ಕೋರ್ಟ್

By Srinath
|
Google Oneindia Kannada News

live-in-relationship-fad-immoral-justice-surinder-rathi
ನವದೆಹಲಿ, ಜ.18: ಲಿವ್ ಇನ್ ಸಂಬಂಧ ಚಟವಾಗಿದೆ ಬೆಳೆಯುತ್ತಿದೆ. ಇದಕ್ಕೆ ಕಾನೂನು ಸಮ್ಮತಿಯೂ ಇದೆ. ಆದರೆ ಅದನ್ನು ಅನೈತಿಕವೆಂದು ಪರಿಗಣಿಸಲಾಗಿದೆ ಎಂದು ಇಲ್ಲಿನ ಹೆಚ್ಚುವರಿ ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ವಿವಾದಕ್ಕೀಡಾಗುವ ಸಾಧ್ಯತೆ ಇದೆ.

ಅಷ್ಟಕ್ಕೂ ಈ ಲಿವ್ ಇನ್ ಸಂಬಂಧ ಎಂಬುದು ನಗರ ಪ್ರದೇಶಗಳಲ್ಲಲಿ ಕಂಡುಬರುತ್ತಿರುವ ವಿದ್ಯಮಾನ. ಕುಖ್ಯಾಥ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಾಗುತ್ತಿದೆ. ಸಂಪ್ರದಾಯಬದ್ಧವಾಗಿ ಹೇಳಬೇಕೆಂದರೆ ಲಿವ್ ಇನ್ ಸಂಬಂಧ ನಮ್ಮ ದೇಶ-ಸಂಸ್ಕೃತಿಗೆ ಇನ್ನೂ ಪರಕೀಯವೇ' ಎಂದು ನ್ಯಾಯಾಧೀಶ ಸುರೀಂದರ್ ಎಸ್ ರಾಠಿ ಹೇಳಿದ್ದಾರೆ.

ಅಷ್ಟಕ್ಕೂ ನ್ಯಾಯಾಧೀಶ ಸುರೀಂದರ್ ರಾಠಿ ಹೀಗೆ ಯಾಕಪ್ಪಾ ಅಭಿಪ್ರಾಯಪಟ್ಟರು ಅಂದರೆ ಮೂರು ವರ್ಷಗಳ ಹಿಂದೆ ಮಿಜೋರಾಂ ಮಹಿಳೆಯೊಬ್ಬರು ನವದೆಹಲಿಯಲ್ಲಿ ತಮ್ಮ ಲಿವ್ ಇನ್ ಸಂಗಾತಿಯನ್ನು (ನೈಜೀರಿಯಾದ ಪ್ರಜೆ) ಹತ್ಯೆ ಮಾಡಿದ್ದರು. ಪ್ರಕರಣದ ಕುರಿತು ತೀರ್ಪು ನೀಡುವ ವೇಳೆ ನ್ಯಾಯಾಧೀಶಯರು ಈ ಮಾತುಗಳನ್ನು ಹೇಳಿದರು. ಅಂದಹಾಗೆ, ನ್ಯಾಯಾಲಯವು 28 ವರ್ಷದ ಈ ಮಹಿಳೆಗೆ 7 ವರ್ಷ ತುರಂಗವಾಸ ಮತ್ತು 7 ಲಕ್ಷ ರು. ಜುಲ್ಮಾನೆ ವಿಧಿಸಿತು.

ಸುಪ್ರೀಂಕೋರ್ಟ್ ಇತ್ತೀಚೆಗೆ ಲಿವ್ ಇನ್ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದರೂ ನಮ್ಮ ಸಮಾಜದಲ್ಲಿ ಅದನ್ನಿನ್ನೂ ಅನೈತಿಕ ಎಂದೇ ಪರಿಗಣಿಸಿದೆ ಎಂದು ನ್ಯಾ. ರಠಿ ಮಾರ್ಮಿಕವಾಗಿ ಹೇಳಿದರು. ಅಪರಾಧಿ ಮಹಿಳೆಯು 7 ಲಕ್ಷ ರು. ಜುಲ್ಮಾನೆ ನೈಜೀರಿಯಾದಲ್ಲಿರುವ ಹತ್ಯೆಗೀಡಾದ 28 ವರ್ಷದ ವ್ಯಕ್ತಿಯ ಸಂಬಂಧಿಕರಿಗೆ ಪಾವತಿಸಬೇಕು. ತಪ್ಪಿದಲ್ಲಿ ಹೆಚ್ಚುವರಿಯಾಗಿಒ ಒಂದು ವರ್ಷ ಜೈಲುವಾಸ ಅನುಭವಿಸಬೇಕು ಎಂದೂ ಕೋರ್ಟ್ ಆದೇಶ ನೀಡಿದೆ.

English summary
In remarks that may stoke a controversy, Additional Sessions Judge Surinder S Rathi in New Delhi said, "Traditionally speaking, live-in relationships were alien to our nation till late. Even today it is fad which is visible only in urban areas."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X