ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಲಾಪುರ ಜಾತ್ರೆಯಲ್ಲಿ ಪಾರಾದರೂ ಉಳಿಯದ ಕುರಿಗಳು

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Saved Lambs die due to negligence
ಯಾದಗಿರಿ, ಜ. 17 : ಮೈಲಾಪುರ ಜಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಪಲ್ಲಕ್ಕಿಯ ಮೇಲೆ ಕುರಿ ಎಸೆಯುವುದನ್ನು ನಿಷೇಧಿಸಿ ಪಾರು ಮಾಡಿದ್ದ ಕುರಿಮರಿಗಳನ್ನು ದುರ್ದೈವವಶಾತ್ ಮತ್ತೆ ಕಸಾಯಿಗಳ ಕೈಗೆ ಒಪ್ಪಿಸಿದಂತಾಗಿದೆ. ಸಾವಿರಾರು ಕುರಿಗಳಲ್ಲಿ 38 ಕುರಿಮರಿಗಳು ಅಮ್ಮನ ಹಾಲಿಲ್ಲದೆ ಸಾವನ್ನಪ್ಪಿವೆ.

ಸುಮಾರು 1404 ಕುರಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಜಿಲ್ಲಾಡಳಿತ ಅವುಗಳನ್ನು ಪಶುಸಂಗೋಪನಾ ಇಲಾಖೆಗೆ ಒಪ್ಪಿಸಿತ್ತು. ಅವುಗಳಲ್ಲಿ ಸುಮಾರು 38 ಕುರಿಮರಿಗಳು ಹಾಲಿಲ್ಲದೇ ದಾರುಣವಾಗಿ ಸಾವನ್ನಪ್ಪಿವೆ. 60 ದಿನದ ಒಳಗಿನ ಇವುಗಳಿಗೆ ಕುರಿಯ ಹಾಲು ಹೊರತುಪಡಿಸಿ ಬೇರೆ ಹಾಲು ಅಪಥ್ಯ. ಹಾಗಾಗಿ ಸಾವನ್ನಪ್ಪಿವೆ ಎನ್ನುವುದು ಪಶು ಸಂಗೋಪನಾ ಇಲಾಖೆ ಸಮಜಾಯಿಷಿ.

ಪಲ್ಲಕ್ಕಿ ಮೇಲೆ ಎಸೆತ ಕುರಿಗಳು ಕೆಳಗೆ ಬಿದ್ದ ನಂತರ ಭಕ್ತರ ಕಾಲಿಗೆ ಸಿಲುಕಿ ಸಾವನ್ನಪ್ಪುತ್ತವೆ ಎನ್ನುವ ಕಳಕಳಿಯಿಂದ ಕುರಿ ಎಸೆತ ನಿಷೇಧಿಸಿದ್ದು ಶ್ಲಾಘನೀಯ. ಕುರಿಗಳ ಜಮಾವಣೆ ಕುರಿತು ಮೊದಲೇ ಮಾಹಿತಿ ಇದ್ದರೂ ಇಲಾಖೆ ಮುಂಜಾಗ್ರತೆ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದೇಕೆ? ಒಂದು ವೇಳೆ ಕುರಿಗಳನ್ನು ಎಸೆದಿದ್ದರೂ ಇಷ್ಟೊಂದು ಕುರಿಮರಿಗಳು ಸಾಯುತ್ತಿರಲಿಲ್ಲ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

English summary
Mylapur fair in Yadgir : Though the district admin saved the sheeps from being thrown inhumanely on the crowd, the lambs were not so lucky. 38 lambs died due to negligence of animal husbandry dept.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X