ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತು ಹೋರ್ಡಿಂಗ್ ಮುಕ್ತವಾಗಿ ಮೈಸೂರು

By Mahesh
|
Google Oneindia Kannada News

Mysore DC Office
ಮೈಸೂರು, ಜ. 16: ಫ್ಲೆಕ್ಸ್ ಮತ್ತು ಜಾಹೀರಾತು ಫಲಕಗಳು ಪಾರಂಪರಿಕ ನಗರ ಮೈಸೂರಿನ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ. ಪ್ರಮುಖ ಜಾಗಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಕಡಿವಾಣ ಹಾಕಲಾಗುವುದು ಎಂದು ಮೈಸೂರು ನಗರ ಪಾಲಿಕೆ ಹೇಳಿದೆ.

ಫೆ.1ರಿಂದ 'ಫ್ಲೆಕ್ಸ್ ರಹಿತ ಮೈಸೂರು" ಘೋಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಜಾಹೀರಾತು ಕಾನೂನು ಜಾರಿ: ಸಾಂಸ್ಕತಿಕ ಹಾಗೂ ಪಾರಂಪರಿಕ ನಗರಿ ಎಂದೇ ಖ್ಯಾತಿಯಾಗಿರುವ ಮೈಸೂರು ನಗರದ ಸೌಂದರ್ಯ ಕಾಪಾಡುವ ಹಿತದೃಷ್ಟಿಯಿಂದ ಮೈಸೂರನ್ನು ಬ್ಯಾನರ್ ಹಾಗೂ ಫ್ಲೆಕ್ಸ್ ಮುಕ್ತ ನಗರವೆಂದು ಘೋಷಿಸಲು ಉದ್ದೇಶಿಸಲಾಗಿದೆ.

ನಗರದಲ್ಲಿ ಯಾವುದೇ ರೀತಿಯ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಹಾಕುವಾಗಿಲ್ಲ. ಪಾಲಿಕೆಯಿಂದ ಅನುಮತಿ ಪಡೆದ ಜಾಹೀರಾತುಗಳನ್ನು ಹೊರತುಪಡಿಸಿ ಯಾವುದೇ ಬ್ಯಾನರ್, ಹೋಲ್ಡಿಂಗ್ಸ್, ಫ್ಲೆಕ್ಸ್ ಹಾಕಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ಹೇಳಿದ್ದಾರೆ.[ಮೈಸೂರು : ಹೆರಿಟೇಜ್ ಅಥವ ಹೋರ್ಡಿಂಗ್ ಸಿಟಿ ?]

English summary
Flex banners, vinyl print hoardings across Mysore city will be removed and Heritage city will be made Hoarding free city said Minister SA Ramdas. Mysore district Administration taken will take measures make city of Palace as cleanest city in State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X