ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.18ರಂದು ವಿಕಿಪೀಡಿಯ ಸೇವೆ ಲಭ್ಯವಿಲ್ಲ

By Mahesh
|
Google Oneindia Kannada News

Wikipedia to shut down on Jan 18?
ನವದೆಹಲಿ,ಜ.17: ಆನ್ ಲೈನ್ ಮುಕ್ತ ವಿಶ್ವಕೋಶ ವಿಕಿಪೀಡಿಯ ತನ್ನ ಸೇವೆಯನ್ನು ಜ.18ರಂದು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಇದು ಪೈರಸಿ ವಿರೋಧಿ ಮಸೂದೆ ವಿರುದ್ಧ ವಿಕಿ ಕೈಗೊಂಡಿರುವ 24 ತಾಸುಗಳ ಪ್ರತಿಭಟನೆ ಎಂದು ವಿಕಿಪೀಡಿಯ ಸಹಸ್ಥಾಪಕ ಜಿಮ್ಮಿ ವೇಲ್ಸ್ ಹೇಳಿದ್ದಾರೆ.

ಯುಎಸ್ ಸೆನೆಟ್ ನಲ್ಲಿ ಪೈರಸಿ ವಿರೋಧಿ ಮಸೂದೆ ಚರ್ಚೆ ಹಂತದಲ್ಲಿದೆ. Protect IP Act ಹಾಗೂ Stop Online Piracy Act (SOPA) ವಿರೋಧಿಸಿ 24 ತಾಸುಗಳ ಪ್ರತಿಭಟನೆಯನ್ನು ವಿಕಿಪೀಡಿಯ ಯೋಜಿಸಿದೆ.

SOPA ಕಾಯ್ದೆ ಜಾರಿಯಾದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇರುವುದಿಲ್ಲ, ಇದು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಗೂಗಲ್ ಹಾಗೂ ಫೇಸ್ ಬುಕ್ ಸಂಸ್ಥೆಗಳು ಪ್ರತಿಕ್ರಿಯಿಸಿದೆ.

ಕಾಮ್ ಸ್ಕೋರ್ ಮಾಹಿತಿ ಪ್ರಕಾರ ವಿಕಿಪೀಡಿಯದ ಇಂಗ್ಲೀಷ್ ಆವೃತ್ತಿ ಪುಟಕ್ಕೆ ಪ್ರತಿ ದಿನ 25 ಮಿಲಿಯನ್ ವೀಕ್ಷಕರು ಭೇಟಿ ಕೊಡುತ್ತಾರೆ.

"SOPA is crippled now. PIPA is still extremely dangerous," ಎಂದು ವೇಲ್ಸ್ ಟ್ವೀಟ್ ಮಾಡಿದ್ದಾರೆ. ವಿಕಿಮೀಡಿಯಾದಲ್ಲಿ ಪ್ರತಿಭಟನೆ ವಿವರಗಳು ಲಭ್ಯವಿದೆ.

Reddit, BoingBoing, Cheezburger network, Craiglist, Mozilla, Minecraft ಮುಂತಾದ ವಿಡಿಯೋ ಗೇಮ್ಸ್ ಆಧಾರಿತ ವೆಬ್ ತಾಣಗಳು ವಿಕಿಪೀಡಿಯ ಹಾದಿಯಲ್ಲೇ ಒಂದು ದಿನದ ಮಟ್ಟಿಗೆ ಸೇವೆ ಸ್ಥಗಿತಗೊಳಿಸಲಿದೆ.

English summary
Wikipedia, the free online encyclopedia will shut down for 24 hours on Wednesday, Jan 18, said Wikipedia co-founder, Jimmy Wales on Monday, Jan 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X