ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಸಿಎಲ್ ನಿವ್ವಳ ಲಾಭ ಶೇ 43ರಷ್ಟು ಜಿಗಿತ

By Mahesh
|
Google Oneindia Kannada News

HCL technologies Q2 Report
ನವದೆಹಲಿ, ಜ.17: ಜಾಗತಿಕ ಮಾರುಕಟ್ಟೆ ಆರ್ಥಿಕತೆ ಏರಿಳಿತದ ನಡುವೆಯೂ ನೋಯ್ಡಾ ಮೂಲದ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ 2ನೇ ತ್ರೈಮಾಸಿಕದಲ್ಲಿ ಶೇ.43 ರಷ್ಟು ನಿವ್ವಳ ಲಾಭ ದಾಖಲಿಸಿ ಅಚ್ಚರಿ ಮೂಡಿಸಿದೆ.

ಹೊರಗುತ್ತಿಗೆ ಸೇವೆಯನ್ನು ನೆಚ್ಚಿಕೊಂಡಿರುವ ಎಚ್ ಸಿಎಲ್ ನಿವ್ವಳ ಆದಾಯ 573 ಕೋಟಿ ರು ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭಲ್ಲಿ ಶೇ.43.3 ರಷ್ಟು ಹೆಚ್ಚಳ ಕಂಡು ಬಂದಿದೆ.

ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಡಿಸೆಂಬರ್ 2011ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 13 ರಷ್ಟು ಪ್ರಗತಿ ಕಂಡಿದೆ. 5,254 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,651.3 ಕೋಟಿ ರು ಗಳಿಸಿತ್ತು.

2ನೇ ತ್ರೈಮಾಸಿಕದ ಅವಧಿಯಲ್ಲಿ ಒಟ್ಟು 2,556 ಹೊಸ ನೇಮಕಾತಿ ನಡೆದಿದೆ. ಡಿ.31 ರ ಕೊನೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆ 83,076 ನಷ್ಟಿದೆ ಎಂದು ಎಚ್ ಸಿಎಲ್ ನ ಸಿಎಫ್ ಒ ಅನಿಲ್ ಹೇಳಿದ್ದಾರೆ.

English summary
Despite of global economic crisis, India's HCL Technologies Ltd has announced today(Jan.17) that company has 43% jump in second-quarter net profit. HCL said to had stable demand for outsourcing technology services during the Quarter 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X