ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಪರ್ಯಾಯ ವಿವಾದ: ಪೇಜಾವರ ಶ್ರೀಗಳೇ ಎಲ್ಲಿದ್ದೀರಿ?

|
Google Oneindia Kannada News

Puttige & Sode Seer
ಉಡುಪಿ, ಜ 16: ಕರಾವಳಿ ಕರ್ನಾಟಕ ಭಾಗದಲ್ಲಿ ನಾಡಹಬ್ಬದ ರೀತಿಯಲ್ಲಿ ಆಚರಿಸಲ್ಪಡುವ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಇನ್ನು ಎರಡೇ ದಿನಗಳು ಬಾಕಿ ಉಳಿದಿದ್ದು, ಪರ್ಯಾಯ ಪೀಠವನ್ನೇರಲಿರುವ ಸೋದೆ ಶ್ರೀಗಳ ಮತ್ತು ಪುತ್ತಿಗೆ ಶ್ರೀಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.

ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ನೀಡಲು ಭಾನುವಾರ (ಜ 15) ಸಂಜೆ ಐದು ಗಂಟೆಯವರೆಗಿನ ಗಡುವು ನೀಡಿದ್ದ ಪುತ್ತಿಗೆ ಶ್ರೀಗಳು ಆಮಂತ್ರಣ ಇನ್ನೂ ಬರದಿರುವ ಹಿನ್ನಲೆಯಲ್ಲಿ ನಾಳೆ (ಜ 17) ಬೆಳಗ್ಗೆ 9 ಗಂಟೆಯಿಂದ ಬುಧವಾರ ( ಜ 18) ಮುಂಜಾನೆ ಐದು ಗಂಟೆಯವರೆಗೆ ರಥಬೀದಿ ಆವರಣದಲ್ಲಿರುವ ಐತಿಹಾಸಿಕ ಅನಂತೇಶ್ವರ ದೇವಾಲದಲ್ಲಿರುವ ಮಧ್ವಾಚಾರ್ಯರು ಅದೃಶ್ಯರಾದ ಸ್ಥಳದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ನಾಡಿನ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿರುವ ಹಿರಿಯ ಪೇಜಾವರ ಶ್ರೀಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಿದೆ. ಅವರು ಗಟ್ಟಿ ಮನಸ್ಸು ಮಾಡಿದರೆ ಈ ಬಿಕ್ಕಟ್ಟಿಗೆ ಪರಿಹಾರ ಖಂಡಿತ. ನಮ್ಮ ಎಲ್ಲಾ ನೋವುಗಳನ್ನು ಶ್ರೀಗಳ ಬಳಿ ಹೇಳಿದ್ದೇವೆ. ಈ ಸಮಸ್ಯೆಗೆ ಅವರಿಂದ ಮಾತ್ರ ಪರಿಹಾರ ಸಾಧ್ಯ. ಸೋದೆ ಶ್ರೀಗಳನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ ಎಸ್ ಆಚಾರ್ಯ ಹೇಳಿಕೆ ನೀಡಿ, ಸೋದೆ ಶ್ರೀಗಳ ಪಾದಪೂಜೆಯ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಅಷ್ಠಮಠಗಳು ಒಂದಾಗಿ ಇದಕ್ಕೆ ಪರಿಹಾರ ಕಾಣಿಕೊಳ್ಳಬೇಕಿದೆ. ಸರಕಾರ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈಗ ಎಲ್ಲರೂ ಕಣ್ಣು ಪೇಜಾವರ ಶ್ರೀಗಳ ಮೇಲಿದ್ದು, ಶ್ರೀಗಳಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸದ್ಯಕ್ಕೆ ವ್ಯಕ್ತವಾಗಿಲ್ಲ.

English summary
Two days left for Udupi Paryaya Festival. The rift between Puttige and Sode seer yet to solve. Puttige seer requested Pejavar seer to solve this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X