ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ-ಆಡ್ವಾಣಿ-ಮೋದಿ ಮುಖಾಮುಖಿ ಇಂದು

By Srinath
|
Google Oneindia Kannada News

jayalalithaa-may-meet-advani-modi-chennai
ಚೆನ್ನೈ, ಜ.14: ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಿಂದ ವಿಮುಖವಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಬಿಜೆಪಿ ನಾಯಕ ಎಲ್‌ ಕೆ ಆಡ್ವಾಣಿ ಮತ್ತು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿಗೆ ಹೆಚ್ಚಿನ ಮಹತ್ವ ದೊರೆತಿದ್ದು, ರಾಜಕೀಯ ಮಹಾಸಂಕ್ರಮಣದ ಮುನ್ಸೂಚನೆಯೂ ಸಿಕ್ಕಿದೆ.

2014ರಲ್ಲಿ ನಡೆಯಲಿರುವ ಮಹಾಚುನಾವಣೆ ಬಳಿಕ ಮುಂದಿನ ಸರಕಾರ ರಚನೆಯಲ್ಲಿ ತನ್ನ ಪಕ್ಷ ಪ್ರಮುಖ ಪಾತ್ರ ವಹಿಸಲಿದೆಯೆಂದು ಎಐಎಡಿಎಂಕೆ ಅಧಿನಾಯಕಿ ಈಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಬಿಜೆಪಿ ನಾಯಕರು ಮತ್ತು ಜಯಲಲಿತಾ ನಡುವೆ ನಡೆಯಬಹುದಾದ ಪ್ರಥಮ ಭೇಟಿ ಇದಾಗಿದೆ. ಶನಿವಾರ ಸಾಯಂಕಾಲ 4.30ಕ್ಕೆ ಈ ತ್ರಿವೇಣಿ ಸಂಗಮ ನಿಗದಿಯಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಮೋದಿ ತೆರಳಿದ್ದರು. ಕಳೆದ ವರ್ಷ ಗುಜರಾತ್‌ನಲ್ಲಿ ಮೋದಿ ಕೈಗೊಂಡಿದ್ದ ಸದ್ಭಾವನಾ ಉಪವಾಸಕ್ಕೆ ಜಯಾ ತಮ್ಮ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಿದ್ದರು.

ಜಯಲಲಿತಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ಇಬ್ಬರು ನಾಯಕರು ಖ್ಯಾತ ರಾಜಕೀಯ ವಿಶ್ಲೇಷಕ ಚೋ. ರಾಮಸ್ವಾಮಿ ಸಂಪಾದಕತ್ವದ ತಮಿಳು ರಾಜಕೀಯ ಸಾಪ್ತಾಹಿಕ 'ತುಘಲಕ್‌'ನ 42ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಚೋ ಅವರು ಈ ಇಬ್ಬರು ನಾಯಕರೊಂದಿಗೆ ಹಾಗೂ ಜಯಲಲಿತಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.

English summary
LK Advani, Narendra Modi to visit Chennai today (Jan 14); may meet Jayalalithaa. Jayalalithaa, who is believed to be nurturing ambitions of a significant role for herself in national politics, had last month asked her partymen to prepare for the Parliamentary polls, saying AIADMK would be in a position to determine the next Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X