ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಯಲ್ಲಿ ಸರ್ಕಾರಕ್ಕೆ 5 ಲಕ್ಷ ಕೋಟಿ ರೂ ನಷ್ಟ

By * ಇಂದ್ರೇಶ್
|
Google Oneindia Kannada News

UPA Government Shares Loss
2001 ರಿಂದ ಈಚೆಗೆ ಉತ್ತಮ ಬೆಳವಣಿಗೆ ದಾಖಲಿಸಿದ್ದ ದೇಶದ ಷೇರು ಮಾರುಕಟ್ಟೆ 2008 ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದಾಗಿ ನಂತರ ತೀವ್ರವಾಗಿ ಕುಸಿಯಿತು. 2009-10ರಲ್ಲಿ ಚೇತರಿಕೆ ದಾಖಲಿಸಿದ ಪೇಟೆ 2011 ರಲ್ಲಿ ಹೂಡಿಕೆದಾರರಿಗೆ ಕಹಿಯಾಯಿತು.

ಕಳೆದ ವರ್ಷ ಮುಂಬೈ ಷೇರು ಪೇಟೆ ಸುಮಾರು ಶೇ.25 ರಷ್ಟು ಕುಸಿತ ದಾಖಲಿಸಿತು. ದೇಶದ ಷೇರು ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರ ಅತೀ ದೊಡ್ಡ ಹೂಡಿಕೆದಾರನಾಗಿದ್ದು 2011 ರಲ್ಲಿ ಸುಮಾರು 5.17 ಲಕ್ಷ ಕೋಟಿ ರೂಪಾಯಿಗಳಷ್ಟು ಹಣವನ್ನು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ ರಂಗದ 71 ನೋಂದಾಯಿತ ಕಂಪೆನಿಗಳಲ್ಲಿ ಸರ್ಕಾರ ಹೂಡಿಕೆ ಮಾಡಿದ್ದು ಹೂಡಿಕೆಯ ಒಟ್ಟು ಮೌಲ್ಯ 19.5 ಲಕ್ಷ ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಸುಮಾರು ಶೇ 26.5 ರಷ್ಟು ಅಂದರೆ 5.17 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯ ಕುಸಿತವಾಗಿದೆ.

ಖಾಸಗಿ ಸಂಸ್ಥೆಗಿಂತ ಸರ್ಕಾರಕ್ಕೆ ನಷ್ಟ ಅಧಿಕ: ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಸರ್ಕಾರದ ನಷ್ಟ ಹೆಚ್ಚಾಗಿದ್ದು ಖಾಸಗಿ ಸಮೂಹಗಳು ಅಲ್ಪ ವನ್ನು ಕಳೆದುಕೊಂಡಿವೆ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರಿ ಸಮೂಹದ ಮಾರುಕಟ್ಟೆ ಮೌಲ್ಯ ಕಳೆದ ವರ್ಷ 1.1 ಲಕ್ಷ ಕುಸಿದಿದೆ.

ಟಾಟಾ ಸಮೂಹದ ಮಾರುಕಟ್ಟೆ ಮೌಲ್ಯ 87,000 ಕೋಟಿ ರೂಪಾಯಿಗಳಷ್ಟು ಹಾಗೂ ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಧೀರೂ ಬಾಯಿ ಅಂಬಾನಿ ಸಮೂಹ 61,000 ಕೋಟಿ ರೂಪಾಯಿಗಳಷ್ಟು, ಗೌತಮ್ ಅದಾನಿ ಮಾಲೀಕತ್ವದ ಅದಾನಿ ಸಮೂಹ ಸುಮಾರು 58,000 ಕೋಟಿ ರೂಪಾಯಿಗಳಷ್ಟು ಮೌಲ್ಯವನ್ನು ಕಳೆದುಕೊಂಡಿದೆ.

ಸಾರ್ವಜನಿಕ ರಂಗದ ಕಂಪೆನಿಗಳಲ್ಲಿನ ಸರ್ಕಾರ ಬಂಡವಾಳ ಹಿಂತೆಗೆತ, ಅಸ್ಥಿರತೆ ಕುರಿತು ಗೊಂದಲ ನಿವಾರಣೆಯಾಗಬೇಕಿದೆ. ಕಂಪೆನಿಗಳ ಷೇರು ಮೌಲ್ಯ ಕುಸಿದಿದ್ದರೂ ಕಂಪೆನಿಗಳ ಪಿಹೆಚ್ ಮೌಲ್ಯ ಉತ್ತಮ ಲಾಭಾಂಶ ವಿತರಣೆ, ಬುಫ್ ಮೌಲ್ಯ, ಹಣಕಾಸು ಸ್ಥಿತಿ ಉತ್ತಮವಾಗೇ ಇದ್ದು ಈ ವರ್ಷ ಏರಿಕೆ ದಾಖಲಿಸಲಿದೆ ಎಂದು ಹೂಡಿಕೆ ತಜ್ಞರು ಹೇಳುತ್ತಾರೆ.

English summary
According to BS Research Bureau, the UPA government holding in 71 listed firms loses Rs 5 lakh crore in stock market in 2011. The government held shares worth Rs 15.87 lakh crore during 2011 but down was down to Rs 10.7 lakh crore during Jan first week BSE report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X