ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ರಾತ್ರಿಗೆ 70 ಲಕ್ಷ ರು. ಪಾವತಿಸಿದ ಕುಬೇರ

By Prasad
|
Google Oneindia Kannada News

Anonymous man spends Rs 70 lakh per night
ದುಬೈ, ಜ. 13 : ಒಂದು ಐಷಾರಾಮಿ ಹೋಟೆಲಲ್ಲಿ ಒಂದು ರಾತ್ರಿ ಕಳೆದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣವನ್ನು ಜೇಬಿನಲ್ಲಿಂದ ಖಾಲಿ ಮಾಡಿಕೊಳ್ಳಬಹುದು? 1 ಲಕ್ಷ, 5 ಲಕ್ಷ, 10 ಲಕ್ಷ ರು.? ಏ ಸುಮ್ಕಿರಿ ತಮಾಸೆ ಮಾಡಬೇಡಿ, ಅನ್ನಬೇಡಿ. ಇಲ್ಲೊಬ್ಬ ಭೂಪ ಒಂದೇ ಒಂದು ರಾತ್ರಿಗಾಗಿ ತೆತ್ತ ಬಿಲ್ ಎಷ್ಟೆಂದು ತಿಳಿದರೆ ನೀವು ಗಲಿಬಿಲಿಗೊಳ್ಳುವುದು ಖಾತ್ರಿ.

ಒಬ್ಬ ಅನಾಮಧೇಯ ವ್ಯಕ್ತಿ, ಕ್ಷಮಿಸಿ ಶ್ರೀಮಂತ ಬಿಲ್ ಪಾವತಿಸಿದ್ದು ಅನಾಮತ್ 70 ಲಕ್ಷ ರು. ಓದೋದುತ್ತಲೇ ಕುರ್ಚಿಯಿಂದ ದಬಕ್ಕನೆ ಬಿದ್ದೀರಿ ಜೋಕೆ! ಇದು ಆಶ್ಚರ್ಯವಾದರೂ ನಿಜವಾದ ಸಂಗತಿ. ಅಬುಧಾಬಿಯ ಎಮಿರೇಟ್ಸ್ ಪ್ಯಾಲೇಸ್ ಹೋಟೆಲಿನ ನೈಟ್ ಕ್ಲಬ್ ನಲ್ಲಿ ಆತ ಬಿಲ್ ನೋಡಿ ಖುದ್ದು ಅದರ ಮಾಲಿಕನೇ ಹೌಹಾರಿದ್ದಾನೆ.

ಲಿಟೈಲ್ಸ್ ನೈಟ್ ಕ್ಲಬ್‌ಗೆ ಬರುವವರೆಲ್ಲ ಆಗರ್ಭ ಶ್ರೀಮಂತರೆ. ಆದರೆ ಒಂದು ರಾತ್ರಿಯ ಬಿಲ್ ಇಷ್ಟಾಗಿದೆಯೆಂದು ನಂಬಲು ಹೋಟೆಲಿನ ಕೆಲಸಗಾರರೇ ಬಿಲ್‌ಕುಲ್ ತಯಾರಿಲ್ಲ. ಸುಜಿತ್ ಪಿಳ್ಳೈ ಎಂಬ ಮ್ಯಾನೇಜರ್ ಆ ಆಗಂತುಕನ ವಿವರಗಳನ್ನು ನೀಡಲು ತಯಾರಿಲ್ಲ.

ಅಷ್ಟೊಂದು ಖರ್ಚು ಮಾಡಲು ಆ ಕುಬೇರನ ಪುತ್ರ ಏನು ಮಾಡಿದ? ಏನೆಲ್ಲ ಅಲ್ಲಿ ತಿಂದ? ಯಾರ್ಯಾರ ಜೊತೆ ಅಲ್ಲಿಗೆ ಬಂದಿದ್ದ ಎಂಬಿತ್ಯಾದಿ ಯಾವ ವಿವರಗಳನ್ನು ಹೋಟೆಲ್ ಸಿಬ್ಬಂದಿಗಳು ನೀಡಲು ನಿರಾಕರಿಸುತ್ತಿದ್ದಾರೆ. ಅದು ಹೋಟೆಲಿನ ಶಿಷ್ಟಾಚಾರಕ್ಕೆ ವಿರುದ್ಧವಾದುದು ಎಂದು ಅವರು ಹೇಳುತ್ತಿದ್ದಾರೆ.

English summary
An anonymous rich man, son of a Kubera, has spent Rs 70 lakh for a night stay in Emirates Palace Hotel's L'Etoiles night club in Abu Dhabi. Hotel manager has admitted this information but has refused to divulge the details of the rich person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X