ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಿಡೊಲ್ಲ: ಬಿಎಸ್ಆರ್ ಕಾಂಗ್ರೆಸ್ ಸೇರೊಲ್ಲ

By Srinath
|
Google Oneindia Kannada News

wont-join-bsr-congress-karunakara-reddy
ಹರಪನಹಳ್ಳಿ (ದಾವಣಗೆರೆ ಜಿಲ್ಲೆ), ಜ12: 'ನಾನು ಬಿಜೆಪಿಯಲ್ಲಿಯೇ ಇದ್ದೇನೆ, ಈ ಪಕ್ಷವನ್ನು ತೊರೆಯಲಾರೆ. ಬಿಎಸ್‌ಆರ್ ಪಕ್ಷ ಸೇರಲಾರೆ' ಎಂದು ಮಾಜಿ ಕಂದಾಯ ಸಚಿವ, ಶಾಸಕ ಜಿ. ಕರುಣಾಕರ ರೆಡ್ಡಿ ಪುನರುಚ್ಚರಿಸಿದರು. ಮೂರ್ನಾಲ್ಕು ತಿಂಗಳ ಅಜ್ಞಾತವಾಸದ ಬಳಿಕ ಒಂದು ತಿಂಗಳ ತಮ್ಮ ಕ್ಷೇತ್ರದ ಜನತೆಗೆ ದರುಶನ ನೀಡಿದ ಕರುಣಾಕರ ರೆಡ್ಡಿ ಅವರು ಆಗ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದರು.

ಈ ಮಧ್ಯೆ, ಸಂಕ್ರಾಂತಿ ಹಬ್ಬದ ದಿನ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದ 'ಬಿಎಸ್ಆರ್ ಕಾಂಗ್ರೆಸ್' ಪಾರ್ಟಿ ಹೆಸರಲ್ಲೇ ರಾಜಕೀಯ ಅಭಿಯಾನ ಆರಂಭಿಸುವುದಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ, ಜನಾರ್ದನ ರೆಡ್ಡಿಯ ಆಪ್ತ ಶ್ರೀರಾಮುಲು ಘೋಷಿಸಿದ್ದಾರೆ.

ಗಮನಾರ್ಹವೆಂದರೆ ನಿನ್ನೆ (ಬುಧವಾರ) ಸೋದರ ಜನಾರ್ದನ ರೆಡ್ಡಿಯ ಹುಟ್ಟುಹಬ್ಬವನ್ನು ಶ್ರೀರಾಮುಲು ಮತ್ತು ತಮ್ಮ ಕುಟುಂಬ ಆಡಂಬರದಿಂದ ಆಚರಿಸುತ್ತಿದ್ದರೆ ಕರುಣಾಕರ ಅವರು ಜಿಲ್ಲೆಯಲ್ಲಿ ಮತದಾರರ ಮಧ್ಯೆ ಕಾಲಕಳೆದರು.

ತಮ್ಮದೇ ಜಿಲ್ಲೆಯ, ತಮ್ಮ ಆಪ್ತಬಳಗದ ಬಿ. ಶ್ರೀರಾಮುಲು ಸಂಘಟಿಸಲಿರುವ ಹೊಸ ಪಕ್ಷಕ್ಕೆ ಸೇರ್ಪಡೆಯಾಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ಯಾವುದೇ ಜಿಲ್ಲೆಯವರು ಹೊಸ ಪಕ್ಷ ಕಟ್ಟಲಿ, ನಾನಂತೂ ಬಿಜೆಪಿಯಲ್ಲಿದ್ದೇನೆ. ಆ ಪಕ್ಷ ತೊರೆಯುವ, ಇಲ್ಲವೇ ಹೊಸ ಪಕ್ಷ ಸೇರ್ಪಡೆಯಾಗುವ ಆಲೋಚನೆಗಳಂತೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಬುಧವಾರ ತಾಲ್ಲೂಕಿನ ಚಿರಸ್ತಹಳ್ಳಿ, ದುಗ್ಗಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಬಳಿಕ, ನೀಲಗುಂದ ಗ್ರಾಮದ ವೆಂಕಟೇಶ್ವರ ಕಾಲೊನಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

English summary
The former Karnataka Revenue Minister G. Karunakara Reddy has reiterated in Harapanahalli, Davanagere that he wony quit BJP. Also he clarified that he will not join BSR Congress. In the meanwhile B Sreeramulu has annonced that his BSR Congress will take shape on Jan 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X