ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳಸಿದ ಒಳಚಡ್ಡಿ ಬಳಕೆಗೆ ಜಿಂಬಾಬ್ವೆ ನಿಷೇಧ

By Prasad
|
Google Oneindia Kannada News

Ban on used underwear in Zimbabwe
ಹರಾರೆ, ಜ. 11 : ತಿನ್ನಲು ಒಪ್ಪೊತ್ತಿನ ಕೂಳು ಸಿಗದಿದ್ದರೂ ಪರವಾಗಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಇಲ್ಲದಿದ್ದರೂ ಪರವಾಗಿಲ್ಲ, ಬಸ್ಸಲ್ಲಿ ಹೋಗಲು ಹತ್ತು ರು. ಜೋಬಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ಎಂಥ ದೈನೇಸಿ ಸ್ಥಿತಿಯಿದ್ದರೂ ಇನ್ನೊಬ್ಬರು ಹಾಕಿ ಬಿಸಾಡಿದ ಅಂಡರ್‌ವೇರನ್ನು ಹಾಕಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ.

ಶೇ. 80ರಷ್ಟು ನಿರುದ್ಯೋಗದಿಂದ ಒದ್ದಾಡುತ್ತಿರುವ, ಬಡತನ ರೇಖೆಗಿಂತ ಸಾಕಷ್ಟು ಕೆಳಗಿರುವ ಬಿಂಬಾಬ್ವೆ ಕೂಡ ಇದನ್ನೇ ಮಾಡಿದೆ. ಚಡ್ಡಿ ಹಾಕ್ಕೊಂಡು ಓಡಾಡದಿದ್ದರೂ ಪರವಾಗಿಲ್ಲ ಬಳಸಿದ ಒಳಚಡ್ಡಿಯನ್ನು ತಮ್ಮ ನಾಗರಿಕರು ಬಳಸಬಾರದೆಂದು, ಸೆಕೆಂಡ್ ಹ್ಯಾಂಡ್ ಚಡ್ಡಿಗಳ ಆಮದು ಮತ್ತು ಮಾರಾಟವನ್ನು ಜಿಂಬಾಬ್ವೆಯ ಹಣಕಾಸು ಸಚಿವ ಟೆಂಡೈ ಬಿಟಿ ನಿಷೇಧಿಸಿದ್ದಾರೆ.

"ನೀವು ಮದುವೆಯಾಗಿದ್ದು, ನಿಮ್ಮ ಹೆಂಡತಿ ಬಳಸಲಾದ ಒಳಚಡ್ಡಿ ಖರೀದಿಸುತ್ತಿದ್ದರೆ, ಅದು ನಿಮ್ಮ ಸೋಲು. ನಾನು ನಿಮ್ಮ ಅತ್ತೆಯಾಗಿದ್ದರೆ, ನನ್ನ ಮಗಳನ್ನು ವಾಪಸ್ ಕರೆದುಕೊಂಡು ಹೋಗಿ, ನಿಮ್ಮ ಸ್ಥಿತಿ ಸರಿಹೋಗುವವರೆಗೆ ವಾಪಸ್ ಕಳಿಸುತ್ತಿರಲಿಲ್ಲ" ಎಂದಿ ಬಿಟಿ ಸಂದೇಶ ರವಾನಿಸಿದ್ದಾರೆ.

ಈ ನಿಷೇಧದಿಂದ ಜನರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುತ್ತದೆ ಮತ್ತು ಜವಳಿ ಉದ್ಯಮವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಜಿಂಬಾಬ್ವೆ ಈ ದಿಟ್ಟ ಕ್ರಮ ತೆಗೆದುಕೊಂಡಿದೆ. ಇಂಥದೇ ನಿಷೇಧವನ್ನು ಘಾನಾ ರಾಷ್ಟ್ರ ಕೂಡ ಹೇರಿದೆ.

English summary
Zimbabwe, one of the poorest countries in the world, with 80% unemployment has refused to use used underwear and has banned importation and sale of undergarments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X